ಕಥಕ್‌ ’ ನೃತ್ಯ ಸಾಮ್ರಾಜ್ಞಿ’ ಸಿತಾರಾ ದೇವಿಗೆ ಗೂಗಲ್‌ ಗೌರವ

ಕಥಕ್‌ ’ ನೃತ್ಯ ಸಾಮ್ರಾಜ್ಞಿ’ ಸಿತಾರಾ ದೇವಿಗೆ ಗೂಗಲ್‌ ಗೌರವ

ಮುಂಬಯಿ: ಕಥಕ್‌ ‘ನೃತ್ಯ ಸಾಮ್ರಾಜ್ಞಿ’ ಸಿತಾರಾ ದೇವಿಯವರ 97ನೇ ಹುಟ್ಟು ಹಬ್ಬದ ಪ್ರಯುಕ್ತ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.
 ತಂದೆಯ ಸಂಗೀತ ಮತ್ತು ನೃತ್ಯ ಸಾಹಿತ್ಯದಿಂದ ಆಕರ್ಷಿತರಾಗಿದ್ದ ಸಿತಾರಾ ದೇವಿ 16ನೇ ವಯಸ್ಸಿನಲ್ಲಿ ಮುಂಬಯಿಯಲ್ಲಿ ನೀಡಿದ ಕಾರ್ಯಕ್ರಮವೊಂದನ್ನು ನೋಡಿದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್ ಟ್ಯಾಗೋರ್ ಅವರು ಸಿತಾರಾ ಅವರಿಗೆ ‘ನೃತ್ಯ ಸಾಮ್ರಾಜ್ಞಿ’ ಎಂಬ ಬಿರುದು ನೀಡಿದರು.

ಬಾಲಿವುಡ್‌ನಲ್ಲಿ ಕಥಕ್‌ ನೃತ್ಯವನ್ನು ಪ್ರದರ್ಶಿಸಿದ ಕೀರ್ತಿ ಸಿತಾರಾ ದೇವಿಗೆ ಸಲ್ಲುತ್ತದೆ. ಮೊಘಲ್‌ ಎ ಆಜಂ ಚಲನಚಿತ್ರ ನಿರ್ದೇಶಕ ಕೆ. ಆಸೀಫ್‌ ಅವರನ್ನು ಸಿತಾರಾ ಮದುವೆಯಾಗಿದ್ದರು. ನಂತರ ಪ್ರತಾಪ್‌ ಬರೂಟ್‌ ಅವರನ್ನು ವಿವಾಹವಾಗಿದ್ದ ಸಿತಾರಾ ದೇವಿ, 2014ರಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು