ಇಂದಿರಾ ಕ್ಯಾಂಟೀನ್ ಬಳಿಕ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ‘ಇಂದಿರಾ ಸಾರಿಗೆ’ ಭಾಗ್ಯ

ಇಂದಿರಾ ಕ್ಯಾಂಟೀನ್ ಬಳಿಕ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ‘ಇಂದಿರಾ ಸಾರಿಗೆ’ ಭಾಗ್ಯ

ಬೆಂಗಳೂರು,ನ.11: ಜನಪ್ರಿಯ ಇಂದಿರಾ ಕ್ಯಾಂಟೀನ್ ಯೋಜನೆ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಮತ್ತೊಂದು ಯೋಜನೆ ಜಾರಿಗೆ ಮುಂದಾಗಿದ್ದು, ಈ ಬಾರಿ ಇಂದಿರಾ ಸಾರಿಗೆ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಮಾಧ್ಯಮವೊಂದು ವರದಿ ಮಾಡಿರುವಂತೆ ಇಂದಿರಾ ಸಾರಿಗೆ ಹೆಸರಿನಲ್ಲಿ ನೂತನ ಸಾರಿಗೆ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದ್ದು. ಈ ಯೋಜನೆ ಅನ್ವಯ ಈ ಇಂದಿರಾ ಸಾರಿಗೆ ಯೋಜನೆಯ  ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಶೇ.50 ಟಿಕೆಟ್ ದರ ರಿಯಾಯಿತಿ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಧ್ಯಮಗಳಿದೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸಾರಿಗೆ ಸಚಿವ ಎಚ್ ಎಂ ರೇವಣ್ಣ ಅವರು,  ಪ್ರಸ್ತುತ ಸರ್ಕಾರದ ಈ ಯೋಜನೆ ಇನ್ನೂ ಚರ್ಚಾ ಹಂಚದಲ್ಲಿದೆ. ಮಹಿಳೆಯರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ಅಂತೆಯೇ ಪ್ರಸ್ತುತ ಯೋಜನೆ ಕುರಿತು ಅಧಿಕಾರಗಳೊಂದಿಗೆ ಸಾಧಕ-ಭಾದಕಗಳನ್ನು ಚರ್ಚಿಸಲಾಗುತ್ತಿದ್ದು. ಯೋಜನೆಯ ವ್ಯಾಪ್ತಿ ಮತ್ತು ಇತರೆ ಅಂಶಗಳನ್ನು ಚರ್ಚಿಸಲಾಗುತ್ತಿದೆ. ಇಲಾಖೆ ಇದೇ ನವೆಂಬರ್ 17ರಂದು ಯೋಜನೆ  ಕುರಿತು ನಿರ್ಧಾರ ಪ್ರಕಟಿಸಲು ಮುಂದಾಗಿದ್ದೆವು. ಆದರೆ ಈ ಬಗೆಗಿನ ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲದ ಕಾರಣ ಬಹುಶಃ ಇನ್ನು 15 ರಿಂದ 20 ದಿನಗಳೊಳಗೆ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ.  ಯೋಜನೆಯಿಂದಾಗಿ ರಾಜ್ಯದ ಮಹಿಳೆಯರು ಪ್ರಮುಖವಾಗಿ ನಗರಭಾಗದಲ್ಲಿರುವ ಗಾರ್ಮೆಂಟ್ಸ್ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಆಟಲ್ ಸಾರಿಗೆ ಯೋಜನೆಯನ್ನು ಪರಿಚಯಿಸಿತ್ತು. ಗ್ರಾಮೀಣ ಭಾಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂದಿನ ಸಾರಿಗೆ ಸಚಿವರಾಗಿದ್ದ ಆರ್ ಅಶೋಕ್ ಅವರು ಈ  ಯೋಜನೆಯನ್ನು ಜಾರಿಗೆ ತಂದಿದ್ದರು.