ಹಡಗಲಿಯಲ್ಲಿ ಗ್ರಾಮೀಣ ಕ್ರೀಡೋತ್ಸವ ಆಚರಣೆ

ಹಡಗಲಿಯಲ್ಲಿ ಗ್ರಾಮೀಣ ಕ್ರೀಡೋತ್ಸವ ಆಚರಣೆ

ವಿಜಯಪುರ,ಅ.6: ವಿಜಯಪುರ ತಾಲೂಕಿನ ಹಡಗಲಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಗ್ರಾಮೀಣ ಕ್ರೀಡೋತ್ಸವವನ್ನು ಆಚರಿಸಲಾಯಿತು. 
ಪಿಕೆಪಿ ಅಧ್ಯಕ್ಷ ಅಶೋಕಗೌಡ ಪಾಟೀಲ ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಡಗಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲೂಕಾ ಅಧಿಕಾರಿಗಳಾದ ಬಿ.ಎಲ್.ವಿಜಯದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ಪ ಎಂಬತ್ತನಾಳ ಸ್ವಾಗತಿಸಿದರು. 
ಸಮಾರಂಭದಲ್ಲಿ ಶ್ರೀಮತಿ ಎಸ್.ವಾಯ್.ಲಂಬು, ಶ್ರೀಮತಿ ಅರವತ್ತಿ, ಹಿರಿಯರಾದ ಪಂಚಯ್ಯ ಸ್ಥಾವರಮಠ, ಮುಖ್ಯ ಗುರು ಭೀಮಪ್ಪ ಮೇಲಿನಮನಿ, ದೇವೇಂದ್ರ ಚಿಂಚಲಿ, ಕ್ರೀಡಾ ಇಲಾಖೆಯ ಎಂ.ವಾಯ್.ಚಿಂಚಲಿ ಇತರರು ಭಾಗವಹಿಸಿದ್ದರುಯ. ಮಾರಣ್ಣ ಬಿ.ಟಿ. ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್.ಅತನೂರ ವಂದಿಸಿದರು. ಕಬಡ್ಡಿ, ವ್ಹಾಲಿಬಾಲ್, ಹಗ್ಗ ಜಗ್ಗಾಟ, ಭಾರ ಎತ್ತುವ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.