ಗ್ರಾಮಗಳ ವಿಕಾಸಕ್ಕೆ ಕ್ರೀಡೆಗಳು ಸಹಕಾರಿ : ಆರ್.ಎಸ್. ಚೌದ್ರಿ 

ಗ್ರಾಮಗಳ ವಿಕಾಸಕ್ಕೆ ಕ್ರೀಡೆಗಳು ಸಹಕಾರಿ : ಆರ್.ಎಸ್. ಚೌದ್ರಿ 

ವಿಜಯಪುರ ಆ,4: ಇಂದಿನ ಆಧುನಿಕ ಯುಗದಲ್ಲಿ ತಾಂತ್ರಿಕ ಕ್ರೀಡೆಗಳ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಸಿ ಹೋಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸಲು ಇಂದಿನ ಯುವಕರು ಮುಂದಾಗಬೇಕು ಎಂದು ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಆರ್.ಎಸ್. ಚೌದ್ರಿ ಹೇಳಿದರು.     
ಅವರು ವಿಜಯಪುರ ತಾಲೂಕಿನ ಆಹೇರಿ ಗ್ರಾಮದಲ್ಲಿ ಗಜಾನನ ಉತ್ಸವದ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಗಜಾನನ ತರುಣ ಮಂಡಳ ಆಶ್ರಯದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 
ಕ್ರೀಡಾ ಪಟುಗಳು ಯಾವುದೇ ಕ್ರೀಡೆಯಲ್ಲಿ ಆತ್ಮವಿಶ್ವಾಸ ಮತ್ತು ಸಮರ್ಥನೆಯಿಂದ ಆಟವಾಡಿದರೆ ಗೆಲುವು ಸಾಧಿಸಲು ಸಾಧ್ಯ. ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಉತ್ತಮ ಆಟವಾಡಿದರೆ ಜಯಸಾಧಿಸಬಹುದು. ಇಂದಿನ ಹಲವಾರು ಕ್ರೀಡಾಪಟುಗಳು ವಿವಿಧ ಕ್ರೀಡೆಯಲ್ಲಿ ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಕೀರ್ತಿ ತಂದಿವೆ. ಅದರಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಬೆಳೆದ ಆಟಗಾರರು ಮುಂಚುಣೆಯಲ್ಲಿದ್ದಾರೆ. ಇಂದು ಗ್ರಾಮಗಳು ವಿಕಾಸ ಹೊಂದಬೇಕಾದರೆ ಕ್ರೀಡೆಗಳು ಸಹಕಾರಿಯಾಗಿವೆ. ಆದ್ದರಿಂದ ಪ್ರತಿ ಮನೆಗೊಬ್ಬ ಕ್ರೀಡಾಪಟು ಇದ್ದರೆ ಆ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ ಈ ಗ್ರಾಮದಲ್ಲಿ ಪ್ರೊ. ಕಬಡ್ಡಿಯಲ್ಲಿ ಆಡತಕ್ಕಂತ ಕಬಡ್ಡಿ ಆಟಗಾರರಾದ ಶಬ್ಬೀರ ಬಾಪು, ಜಗದೀಶ ಕುಂಬಳೆ, ಇನ್ನೀತರರು ಈ ಗ್ರಾಮದಲ್ಲಿ ಆಟವಾಡಿದ್ದು ಆಹೇರಿ ಗ್ರಾಮದ ಹಿರಿಮೆ ಹೆಚ್ಚಾಗಿದೆ ಎಂದರು. 
ಮುಖ್ಯ ಅತಿಥಿಗಳಾಗಿ ಶಾಂತಿನಿಕೇತನ ಕಾಲೇಜಿನ ಉಪನ್ಯಾಸಕ ಶರಣಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ ಕುಸ್ತಿ ಖೊ ಖೊ ಇವುಗಳಲ್ಲಿ ಭಾಗವಹಿಸುವುದರಿಂದ ಮನಶುದ್ಧಿ, ಆತ್ಮಶುದ್ಧಿ ಹೊಂದಬಹುದಾಗಿದೆ. ಕ್ರೀಡಾಪಟುಗಳು ದುಶ್ಚಟಗಳಿಂದ ದೂರವಿದ್ದು ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕೆಂದರು.     
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಕ್ರೀಡಾ ಸಂಘದ ಅಧ್ಯಕ್ಷ ಬಂಡೆಪ್ಪ ತೇಲಿ ಮಾತನಾಡಿ, ಕಬಡ್ಡಿ ಕ್ರೀಡೆ ಗ್ರಾಮೀಣ ಮಟ್ಟದ ಗಂಡು ಮೆಟ್ಟಿನ ಕ್ರೀಡೆಯಾಗಿದೆ. ಕಬಡ್ಡಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಜನರಲ್ಲಿ ಭಾವನಾತ್ಮಕ ಸಹೋದರತ್ವ ಸಾಮರಸ್ಯ ಉಂಟಾಗಲಿದೆ. ಯುವಜನರು ದುಶ್ಚಟಗಳಿಗೆ ಬಲಿಯಾಗದೆ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯಕರವಾಗಿ ತಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕು. ಆಹೇರಿ ಗ್ರಾಮ ಕ್ರೀಡೆಗಳ ತವರು ಈ ಗ್ರಾಮದಲ್ಲಿ ಸುಮಾರು 25 ವರ್ಷಗಳಿಂದ ರಾಜ್ಯ ಮತ್ತು ಅಂತರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಂiÀiನ್ನು ಸಂಘಟಿಸುತ್ತ ಬರಲಾಗಿದೆ. ಪಂದ್ಯಾವಳಿ ಯಶಸ್ವಿಗೆ ಸಾರ್ವಜನಿಕರು ಕಾರಣಿಭೂತರಾಗಿದ್ದಾರೆ ಎಂದರು.
ಆಹೇರಿ ಬಂಥನಾಳ ವಿರಕ್ತಮಠದ ಶ್ರೀ ಚಿಲ್ಲಾಲಿಂಗ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು. ಗ್ರಾಮದ ಪ್ರಥಮ ದರ್ಜೆ ಗುತ್ತೆದಾರರಾದ ಆತ್ಮಾನಂದ ಎಸ್. ದೊಡ್ಡಮನಿ, ಎ.ಪಿ.ಎಮ್.ಸಿ. ಮಾಜಿ ನಿರ್ದೇಶಕ ಎಸ್.ಎಸ್. ಢಗೆ, ಗ್ರಾಮದ ಮುಖಂಡರಾದ ಸಂಗಪ್ಪ ಮೆಟಗಾರ, ದುಂಡಪ್ಪ ಶಿವಣಗಿ, ಬಸವರಾಜ ಶಿವಣಗಿ, ಬಾಬು ಯಂಭತ್ನಾಳ, ಮಹೇಶ ರಜಪೂತ, ಬಸವರಾಜ ವಿಜಯಪುರ, ರವಿ ಇಬ್ರಾಹಿಂಪುರ, ಸಿ.ಬಿ. ರಜಪೂತ, ಆತ್ಮಾನಂದ ಇಬ್ರಾಹಿಂಪುರ, ಜಟ್ಟೆಪ್ಪ ಶಿರಕನಹಳ್ಳಿ, ಜಗದೀಶ ಬಿರಾದಾರ, ಕಲ್ಲಪ್ಪ ಹಡಗಲಿ, ವಿಶ್ವಾನಥ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು. ಶ್ರೀಕಾಂತ ಇಬ್ರಾಹಿಂಪುರ ಸ್ವಾಗತಿಸಿದರು. ಬಾಬು ಯಂಬತ್ನಾಳ ನಿರೂಪಿಸಿದರು. ಸಂಜು ಮೆಟಗಾರ ವಂದಿಸಿದರು.
ಬಹುಮಾನ ದಾನಿಗಳು : 
ಈ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ದೇವಾನಂದ ಚವ್ಹಾಣ 11 ಸಾವಿರ ಪ್ರಥಮ ಬಹುಮಾನ ಕೊಡಮಾಡಿದ್ದಾರೆ. ದ್ವಿತೀಯ ಬಹುಮಾರ 7,001 ಗ್ರಾಮದ ಪ್ರಥಮ ದರ್ಜೆ ಗುತ್ತೆದಾರರಾದ ಆತ್ಮಾನಂದ ಎಸ್. ದೊಡ್ಡಮನಿ. ತೃತೀಯ ಬಹುಮಾನ 3,001 ತಾಲೂಕ ಪಂಚಾಯತ ಮಾಜಿ ಸದಸ್ಯ ರಾಚು ವಾಲಿಕಾರ ನೀಡಿದ್ದಾರೆ. ಮೂರು ತಂಡಗಳಿಗೆ ಟ್ರೊಫಿಯನ್ನು ಮಹೇಶ ರಜಪೂತ, ಹುಸೇನ್‍ಸಾಬ ಜಾತಗಾರ, ಸಂಜು ನಾಯಕ ಕೊಡಮಾಡಿದ್ದಾರೆ.