ಖೋ ಖೋ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಖೋ ಖೋ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ವಿಜಯಪುರ,ಸೆ.7: ನಗರದ ಇಬ್ರಾಹಿಂಪೂರ ಬಡಾವಣೆಯಲ್ಲಿರುವ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ. 6 ರ ವಿದ್ಯಾರ್ಥಿನಿಯರು ಖೋಖೋ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವಿದ್ಯಾರ್ಥಿನಿಯರಾದ ವೈಷ್ಣವಿ ಅಗಸರ ಮತ್ತು ದಾನಮ್ಮ ಹೆಳವರ ಮುಂದಾಳತ್ವದೊಂದಿಗೆ ರೇಣುಕಾ, ಶಿವಲೀಲಾ, ರೇಣುಕಾ ಚಲವಾದಿ, ಮೇಘಾ ವಸ್ತ್ರದ, ಮೇಘಾ ಮುಖೆ, ಸಾವಿತ್ರಿ, ಸುಶ್ಮಿತಾ ರೂಪಾ, ಸಾನಿಯಾ ಮುಲ್ಲಾ ಖೋಖೋ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 
ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಖೋ ಖೋ ಆಯ್ಕೆಯಾಗಿದ್ದಕ್ಕೆ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸಮಿತಿಯವರು, ಮುಖ್ಯ ಗುರುಮಾತೆಯವರಾದ ಶ್ರೀಮತಿ ಬಿ.ಎಫ್. ಚವ್ಹಾಣ, ದೈ. ಶಿಕ್ಷಕರಾದ ಶ್ರೀ ಎಲ್.ಜಿ. ಶೀಳಿನ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.