ಜಂಬಗಿ ಗ್ರಾಮದಲ್ಲಿ ಕಬಡ್ಡಿ ಉತ್ಸವ

ಜಂಬಗಿ ಗ್ರಾಮದಲ್ಲಿ ಕಬಡ್ಡಿ ಉತ್ಸವ

ವಿಜಯಪುರ,ಜೂ.8:  ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆ ನಾಗಠಾಣ ಮಂಡಲದ ಯುವ ಮೋರ್ಚಾ ವತಿಯಿಂದ ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮ ಶತಮಾನೋತ್ಸವ ನಿಮಿತ್ಯ ಕಬಡ್ಡಿ ಉತ್ಸವವನ್ನು ಜಂಬಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. 
ಈ ಸಭೆಯಲ್ಲಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ರವಿ ಖಾನಾಪೂರ ಮಾತನಾಡಿ ಪಂಡಿತ ದೀನದಯಾಳ ಉಪಾಧ್ಯಾಯರ ಕನಸಿನಂತೆ ಬಿಜೆಪಿ ಬೆಳವಣಿಗೆ ಆಗಬೇಕು ಹಳ್ಳಿಯಿಂದ ದಿಲ್ಲಿಯವರೆಗೆ ಸಶಕ್ತ ಯುವ ಶಕ್ತಿ ಪಕ್ಷಕ್ಕಾಗಿ ದುಡಿಯುವಂತಾಗಬೇಕು, ಗ್ರಾಮೀಣ ಕ್ರೀಡೆಗಳನ್ನು ಆಡಿಸುವ ಮೂಲಕ ಗ್ರಾಮೀಣ ಭಾಗದಲ್ಲಿರುವ ಕ್ರೀಡಾ ಅಭಿಮಾನಿಗಳನ್ನು, ರೈತಾಪಿ ವರ್ಗದ ಯುವಕರನ್ನು ರಾಜಕೀಯೇತರ ಸಂಘಟನೆಯಲ್ಲಿ ಕೆಲಸ ಮಾಡುವ ಯುವ ವರ್ಗವನ್ನು ಸೆಳೆಯಲು ಬಿಜೆಪಿ ಯುವ ಮೋರ್ಚಾ ಈ ವಿನೂತನ ಸಂಘಟನೆಗೆ ಒತ್ತು ಕೊಟ್ಟಿದೆ. ಮುಂಬರುವ 2018ರ ಚುನಾವಣೆಯಲ್ಲಿ ಯುವಮೋರ್ಚಾ ಪಕ್ಷದ ಎಲ್ಲ ಹಿರಿಯರಿಗೆ ದೊಡ್ಡ ಶಕ್ತಿಯಾಗಿ ನಿಲ್ಲಲು ಶ್ರಮಿಸುತ್ತದೆ ಎಂದು ಹೇಳಿದರು.  
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷರಾದ ವಿಠ್ಠಲ ಕಟಕದೊಂಡ ಮಾತನಾಡಿ ನಮ್ಮೆಲ್ಲ ಯುವಕರು ರಾಷ್ಟ್ರ ಭಕ್ತಿಯನ್ನು ಬೆಳೆಸಿಕೊಳ್ಳಬೇಕು, ನೆಲ, ಜಲ, ಬಾಷೆಯ ಬಗ್ಗೆ ಗೌರವದಿಂದ ನಡೆದುಕೊಳ್ಳಬೇಕು, ಯುವಕರಾದವರು ಸದೃಡವಾದ ಮನಸ್ಸನ್ನು ಹೊಂದಲಿ. ನಮ್ಮ ಹಳೆಯ ಕಾಲದ ನೆನಪುಗಳನ್ನು ಮೆಲಕು ಹಾಕುವಂತಹ ಕಾರ್ಯ ಯುವ ಮೋರ್ಚಾ ಮಾಡುತ್ತಿದೆ ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.  
ಪ್ರಥಮ ಸ್ಥಾನ ಜಂಬಗಿ ಗ್ರಾಮದ ಮಾರುತೇಶ್ವರ, ದ್ವಿತೀಯ ಕರವೆ ಹಾಗೂ ತೃತೀಯ ಬಹುಮಾನವನ್ನು ಸಂಗೊಳ್ಳಿ ರಾಯಣ್ಣ ತಂಡ ಬಹುಮಾನ ಪಡೆದವು. 
ಪಕ್ಷದ ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಚಿದಾನಂದ ಚಲವಾದಿ, ನಾಗೇಂದ್ರ ಮಾಯವಂಶಿ, ನಾಗಠಾಣ ಮಂಡಲದ ಅಧ್ಯಕ್ಷ ಸೋಮನಾಥ ಕತ್ನಳ್ಳಿ, ಕಲ್ಲಪ್ಪ ಬಡಗಿ, ಜಿ.ಪಂ. ಸದಸ್ಯ ನವೀನ ಅರಕೇರಿ, ಬಿ.ಎಸ್. ಪಾಟೀಲ, ಆನಂದ ಬಂಡಿ, ರಾಜುಗೌಡ ಪಾಟೀಲ (ನಾದ), ಪ್ರಕಾಶ ಲೋಣಿ, ರಮೇಶ ವಗ್ಗರ, ಬಿ.ಬಿ. ಬಿರಾದಾರ, ರವಿ ಉಪ್ಪಲದಿನ್ನಿ, ಪರಶುರಾಮ ಮಾಸ್ತರ, ರಾಮು ಅಂಕಲಗಿ, ಸದಾಶಿವ ಡಗೆ, ಸಿದ್ದು ಬಿರಾದಾರ, ಸಂಗಮೇಶ ಗುಂದಳೆ ಸ್ವಾಗತಿಸಿದರು, ಬಾಳು ಮಾನೆ ನಿರೂಪಣೆ ಮಾಡಿದರು.