ಹಾಜಿಮಸ್ತಾನಾ ಈಜು ಸ್ಪರ್ಧೆಯಲ್ಲಿ ಪ್ರಥಮ

ಹಾಜಿಮಸ್ತಾನಾ ಈಜು ಸ್ಪರ್ಧೆಯಲ್ಲಿ ಪ್ರಥಮ

ವಿಜಯಪುರ ಸೆ,12: ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ದಸರಾ ಕ್ರೀಡೆಯಲ್ಲಿ ಭಾಗವಹಿಸಿದ ಹಾಜಿಮಸ್ತಾನಾ ಅಬ್ದುಲ್‍ಕರೀಂ ಸೋನಾರ (14) ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಚಂದ್ರಕಾಂತ ತಾರನಾಳ ಹಾಗೂ ಎಸ್.ಎಸ್.ಕೋಟ್ಯಾಳ ಅವರು ತರಬೇತಿ ನೀಡಿದ್ದರು. ಬಾಲಕನ ಸಾಧನೆಗೆ ಪಾಲಕರು, ಓಣಿಯ ನಿವಾಸಿಗಳು ಅಭಿನಂದಿಸಿದ್ದಾರೆ.