ಮಕ್ಕಳ ಮನಸ್ಸು ಕ್ರೀಡೆಯತ್ತ ತಿರುಗಿಸುವ ಅಗತ್ಯವಿದೆ : ಮಾಲಿಪಾಟೀಲ

ಮಕ್ಕಳ ಮನಸ್ಸು ಕ್ರೀಡೆಯತ್ತ ತಿರುಗಿಸುವ ಅಗತ್ಯವಿದೆ : ಮಾಲಿಪಾಟೀಲ


ವಿಜಯಪುರ: ನಗರದ ಪ್ರತಿಷ್ಠಿತ ಶಾಂತಿನಿಕೇತನ  ಶಿಕ್ಷಣ ಸಂಸ್ಥೆಯಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಅವರ ಹುಟ್ಟು ಹಬ್ಬವನ್ನು ಇಡೀ ದೇಶದ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸುತ್ತಿದೆ.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಚಂದನಗೌಡ ಮಾಲಿಪಾಟೀಲ ಮಾತನಾಡಿ, ಸಧ್ಯದ ಆಹಾರ ಪದ್ಧತಿಯಲ್ಲಿ ಬದಲಾವಣೆ ಅವಶ್ಯಕ ಪ್ಲಾಸ್ಟಿಕ್, ಪೊಟ್ಟಣಗಳಲ್ಲಿ ಆಹಾರವನ್ನು ಸಂಗ್ರಹಿಸಿ ತಿನ್ನುವದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಮಕ್ಕಳು ಸದೃಢವಾಗಿ ಬೆಳೆಯಬೇಕಾದರೆ ಪಾಲಕರು ಮಕ್ಕಳ ಆಹಾರ ಪದ್ಧತಿಯಲ್ಲಿ ಗಮನಹರಿಸಬೇಕಾಗಿದೆ. ಏಕೆಂದರೆ ಸದೃಢವಾಗಿ ಶರೀರದಲ್ಲಿ ಸದೃಢವಾದ ಮನಸ್ಸನ್ನು ದೈಹಿಕ ಕ್ರೀಡೆಯತ್ತ ತಿರುಗಿಸುವುದು ಸದ್ಯದ ಅವಶ್ಯಕತೆಯಾಗಿದೆ. ಎಂದು ನುಡಿದರು. 
ದೈಹಿಕ ಶಿಕ್ಷಕ ಎ.ಎಚ್. ಸಗರ ಮಾತನಾಡಿ, ಮೇಜರ್ ಧ್ಯಾನಚಂದ ಅವರ ಸಾಧನೆಯನ್ನು ಮಕ್ಕಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಅನೀತಾ ದೇಸಾಯಿ, ಹಫೀಜ್.ಎಸ್.ಆರ್.ಕಟ್ಟಿಮನಿ, ಶ್ರೀಶೈಲ ಹುಕ್ಕೇರಿ, ಭಾರತಿ ಪಾಟೀಲ, ಸುನಂದಾ ಮತ್ತಿತರು ಶಿಕ್ಷಕ ವೃಂದ ಉಪಸ್ಥಿತರಿದ್ದರು.