ಮರು ಮದುವೆ : ಎಸ್ಸಿ, ಎಸ್ಟಿ ವಿಧವೆಯರಿಗೆ ಸಹಾಯಧನ

ಮರು ಮದುವೆ : ಎಸ್ಸಿ, ಎಸ್ಟಿ ವಿಧವೆಯರಿಗೆ ಸಹಾಯಧನ

ಬಾಗಲಕೋಟೆ : ಜೂ.7: ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಧವೆಯರು ಮರು ಮದುವೆಯಾದಲ್ಲಿ 3 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತಿದ್ದು ಅರ್ಹರಿಂದ ಅರ್ಜಿ 
ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದವರಾಗಿದ್ದು, ವಯೋಮಿತಿ ಕನಿಷ್ಟ 18 ರಿಂದ 42 ವರ್ಷ ಹಾಗೂ ಗರಿಷ್ಟ 21 ರಿಂದ 45 ವರ್ಷ ಆಗಿದೆ. ಮರು 
ಮದುವೆಯಾದ ಒಂದು ವರ್ಷದೊಳಗೆ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಬೇಕು. ಅಲ್ಲದೆ ವಿವಾಹವಾದ ಬಗ್ಗೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿಯಾಗಿರತಕ್ಕದ್ದು. ವಿಧವಾ ಮಹಿಳೆಯರು ಅಂತರ್ ಜಾತಿ 
ವಿವಾಹವಾದಲ್ಲಿ ಸದರಿ ಯೋಜನೆಯಲ್ಲಿ ಪ್ರೋತ್ಸಾಹಧನ ಪಡೆದಿದ್ದಲ್ಲಿ ಅಂತರ್ ಜಾತಿ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅರ್ಹರಿರುವದಿಲ್ಲ.
    ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಯುವಕ, ಯುವತಿಯರು ಸರಳ ವಿವಾಹ ಕಾರ್ಯಕ್ರಮದಡಿ ಮದುವೆಯಾದಲ್ಲಿ ಅಂತಹವರುಗಳು ಈ ಯೋಜನೆಯಡಿಯಲ್ಲಿ ಸರಳ ವಿವಾಹದ 
ರೂ. 50 ಸಾವಿರ ಹೊರತುಪಡಿಸಿ ಉಳಿದ 2.50 ಲಕ್ಷ ರೂ. ಪ್ರೋತ್ಸಾಹಧನವನ್ನು ಪಡೆಯಲು ಅರ್ಹರಿರುತ್ತಾರೆ. ಮಂಜೂರಾದ ಪ್ರೋತ್ಸಾಹಧನವನ್ನು ಪುನರ್ ವಿವಾಹವಾದ ವಿಧವೆಯ ಹೆಸರಿನಲ್ಲಿರುವ ಬ್ಯಾಂಕ್ 
ಖಾತೆಗೆ ಎನ್‍ಇಎಪ್‍ಟಿ ಮೂಲಕ ಜಮಾ ಮಾಡಲಾಗುತ್ತದೆ ಎಂದು ಬಾಗಲಕೋಟ ತಾಲೂಕ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.