ಒಂದೇ ಕುಟುಂಬದ ನಾಲ್ವರು ನಾಲ್ವರು ಸಾವು

ಒಂದೇ ಕುಟುಂಬದ ನಾಲ್ವರು ನಾಲ್ವರು ಸಾವು

ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ಅಂತ್ರಾಯಿಪಲ್ಕೆ ಹೊಳೆಯಲ್ಲಿ ಬುಧವಾರ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಇನ್ನೊಬ್ಬರು ಅಸ್ವಸ್ಥಗೊಂಡಿದ್ದಾರೆ.  ಉಡುಪಿ ಜಿಲ್ಲೆಯ ಕಾಪು ಪಕೀರನಕಟ್ಟೆಯ ರಹೀಮ್ (30), ಅವರ ಪತ್ನಿ ರುಬೀನಾ (25), ಯಾಸ್ಮಿನ್ (23) ಮತ್ತು ಸುಬಾನ್ (15) ಮೃತಪಟ್ಟವರು. ಇನ್ನೊಬ್ಬಾಕೆ ಮೈಮೂನಾ ಎಂಬವರು ನೀರಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದು, ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಕಾಜೂರು ದರ್ಗಾಕ್ಕೆ ಭೇಟಿ ನೀಡಿದ್ದ ಇವರು ಹೊಳೆಯಲ್ಲಿ ಸ್ನಾನ ಮಾಡಲು ನೀರಿಗೆ ಇಳಿದಿದ್ದರು. ಬಾಲಕ ನೀರಲ್ಲಿ ಕೊಚ್ಚಿ ಹೋಗುವುದನ್ನು ಕಂಡು ಉಳಿದವರು ಆತನನ್ನು ರಕ್ಷಿಸಲು ಮುಂದಾದಾಗ ಈ ದುರಂತ ಸಂಭವಿಸಿತು.