ದಿ. 16 ರಿಂದ ಶ್ರೀ ಸಿದ್ದಲಿಂಗ ಶಿವಯೋಗಿಗಳ 80ನೇ ಪುಣ್ಯಾರಾಧನಾ ಸಪ್ತಾಹ ಮಹೋತ್ಸವ 

ದಿ. 16 ರಿಂದ ಶ್ರೀ ಸಿದ್ದಲಿಂಗ ಶಿವಯೋಗಿಗಳ 80ನೇ ಪುಣ್ಯಾರಾಧನಾ ಸಪ್ತಾಹ ಮಹೋತ್ಸವ 

ಬಾಗಲಕೋಟೆ 11 ಃ ಸುಕೆÂ್ಷೀತ್ರ ಕನ್ನೂರ ಗ್ರಾಮದ ಶ್ರೀ ಸ.ಸ. ಸಿದ್ದಲಿಂಗ ಶಿವಯೋಗಿಗಳ 80ನೇ ಪುಣ್ಯಾರಾಧನಾ ಸಪ್ತಾಹ ಮಹೋತ್ಸವ ಮತ್ತು ಶ್ರೀ ಸದ್ಗುರು ಸಮರ್ಥ ವಿಶ್ವರಾಜೇಂದ್ರ ಮಹಾಸ್ವಾಮಿಗಳ 50ನೇ ಜನೊÂ್ಮೀತ್ಸವ ಕಾರ್ಯಕ್ರಮ ದಿ. 16 ರಿಂದ 18 ರವರೆಗೆ ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಶ್ರೀ ಸ.ಸ. ಸಚ್ಚಿದಾನಂದ ಶಿವಯೋಗಿಗಳ ಪುಣ್ಯಾಧಾಮದ ಎದುರಿಗಿರುವ ದೇವಸ್ಥಾನದಲ್ಲಿ ಜರುಗಲಿದೆ.
  

     ದಿ. 16 ರಂದು ಶನಿವಾರ ಸಂಜೆ 6 ಗಂಟೆಗೆ ಶ್ರೀ ಸದ್ಗುರು ವಿಶ್ವರಾಜೇಂದ್ರ ಮಹಾಸ್ವಾಮಿಗಳು ಹಾಗೂ ಮುರನಾಳದ ಶ್ರೀ ಮಳೆರಾಜೇಂದ್ರ ಮಹಾಸ್ವಾಮಿಗಳು ಮಹಾಪುರುಷ ಅವರಿಂದ ವೀಣಾ ಪೂಜೆ ಹಾಗೂ ದಾಸಬೋಧ ಪೂಜೆಯೊಂದಿಗೆ ಸಪ್ತಾಹ ಪ್ರಾರಂಭವಾಗಿ ದಿ. 18 ರ ಸೋಮವಾರದ ಎಳ್ಳ ಅಮವಾಸ್ಯೆ ದಿನದಂದು ಪುಷ್ಪವೃಷ್ಟಿಯೊಂದಿಗೆ ಮಂಗಲಗೊಳ್ಳಲಿದೆ.

    ದಿ. 17 ರಂದು ಸಾಯಂಕಾಲ 7 ಗಂಟೆಗೆ ಅಷ್ಠ ಸಹಸ್ರ ಕಾರ್ತಿಕ ದೀಪೆÇೀತ್ಸವ ಹಾಗೂ ಧರ್ಮ ಚಿಂತನ ಗೋಷ್ಠಿ, ದಾಸಬೋಧ ವಾಚನ ಕಾರ್ಯಕ್ರಮ ಜರುಗಲಿದ್ದು ಶ್ರೀ ಸದ್ಗುರು ಸಮರ್ಥ ವಿಶ್ವರಾಜೇಂದ್ರ ಮಹಾಸ್ವಾಮಿಗಳು ಅಧ್ಯP್ಷÀತೆ, ಮುರನಾಳದ ಶ್ರೀ ಮಳೇರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ, ಹಿರೇಮಠದ ಶ್ರೀ ಸದಾಶಿವ ಮಹಾರಾಜರು ನೇತೃತ್ವ, ಸವದತ್ತಿಯ ಶ್ರೀ ಜಗದ್ಗುರು ಶಿವಾನಂದ ಮಠದ ಡಾ. ಶ್ರೀ ಬಸವರಾಜ ಮಹಾಸ್ವಾಮಿಗಳು, ಜತ್ತ ತಾಲೂಕಲಿನ ಕೊಳಗೇರಿಯ ಪರಮ ಪೂಜ್ಯ ಶ್ರೀ ಬಸನಗೌಡ ಪಾಟೀಲ ಸಮ್ಮುಖ ವಹಿಸಲಿದ್ದು ನಂತರ ಗಾನಭೂಷಣ ಅಡಿವೆಪ್ಪ ಗವಾಯಿಗಳು ಕಮತರ, ಕೆ. ಸಂಕಪ್ಪ ಮಾಸ್ಟರ, ಗಣೇಶ ರಾಮನಗೌಡರ ಅವರುಗಳ ಸಂಗೀತ ಸೇವೆ ಕಾರ್ಯಕ್ರಮ ಜರುಗಲಿದೆ.
    

   ದಿ. 18 ರಂದು ಮುಂಜಾನೆ 12 ಗಂಟೆಗೆ ಸಪ್ತಾಹ ಮಂಗಲೋತ್ಸವ ಜರುಗಲಿದ್ದು, ನಂತರ ಶ್ರೀಮಠದ ಸಕಲ ಸದ್ಭಕ್ತರಿಂದ ಗುರುವಂದನಾ, ಜನೊÂ್ಮೀತ್ಸವ ಕಾರ್ಯಕ್ರಮ ಜರುಗಲಿದೆ, ಶ್ರೀಮಠದ ಪೀಠಾಧಿಪತಿಗಳಿಂದ ಆಶೀರ್ವಚನ, ಭಕ್ತಿಯ ಪುಷ್ಪವೃಷ್ಠಿ ಸಮರ್ಪಣೆ ನಂತರ ಮಹಾಪ್ರಸಾದ ಜರುಗಲಿದ್ದು ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃತಾರ್ಥರಾಗಬೇಕೆಂದು ಸದ್ಭಕ್ತ ಮಂಡಳಿ ಕೋರಿದೆ.