ಲೋಕಾಪುರದಲ್ಲಿ ಅಯ್ಯಪ್ಪ ಮಹಾಪೂಜೆ

ಲೋಕಾಪುರದಲ್ಲಿ ಅಯ್ಯಪ್ಪ ಮಹಾಪೂಜೆ

ಲೋಕಾಪುರ ಡಿ,17 : ಲೋಕಾಪುರದಲ್ಲಿ ಅಖಿಲ ಭಾರತ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಭಕ್ತಮಂಡಳಿಯಿಂದ ಅಯ್ಯಪ್ಪಸ್ವಾಮಿ ಮಹಾಪುಜೆ ನಡೆಯಿತು. ಲಕ್ಷಾನಟ್ಟಿ, ಅರಳಿಕಟ್ಟಿ, ವೆಂಕಟಾಪೂರ, ಜಾಲಿಕಟ್ಟಿ, ನಾಗಣಾಪೂರ, ಸೇರಿದಂತೆ ನಾನಾ ಗ್ರಾಮಗಳ ನೂರಾರು ಅಯ್ಯಪ್ಪಭಕ್ತರು ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು. 
  

 ಮೂರು ಗಂಟೆಗಳ ಕಾಲ ಭಜನೆ, ಅಯ್ಯಪ್ಪಸ್ವಾಮಿ ಭಾವ ಚಿತ್ರ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಲೋಕೇಶ್ವರ ದೇವಸ್ಥಾನದಿಂದ ಜ್ಯೋತಿಯನ್ನು ತಂದು ಅಲಂಕೃತ ಅಯ್ಯಪ್ಪಸ್ವಾಮಿಯ ಮೂರ್ತಿಯ ಸುತ್ತಮುತ್ತಲಿನ ದೀಪಗಳನ್ನು ಹಚ್ಚಲಾಯಿತು. ನಂತರ ಮೂರ್ತಿಗೆ ಅಭಿಷೇಕ ಮಾಡಲಾಯಿತು. ಮದ್ಯಾಹ್ನ ಸಾರ್ವಜನಿಕರಿಗೆ ಅನ್ನಪ್ರಸಾದ ವ್ಯವಸ್ಥೇಯನ್ನು ಮಾಡಲಾಗಿತ್ತು. ಗುರುಸ್ವಾಮಿ ಮಲ್ಲಪ್ಪ ಚೌಧರಿ, ಕಲ್ಲಪ್ಪ ಅರಮನಿ, ಮಹಾಂತೇಶ ಲಮಾಣಿ, ಹಣಮಂತ ಭಜಂತ್ರಿ, ವಿಠ್ಠಲ ಗಸ್ತಿ  ಲೋಕಾಪುರ ಸೇರಿದಂತೆ ನಾನಾ ಗುರುಸ್ವಾಮಿಗಳು ಪೂಜೆಯ ನೇತೃತ್ವ ವಹಿಸಿದ್ದರು. 

         
    ಲೋಕಾಪುರದಲ್ಲಿ ಅಖಿಲ ಭಾರತ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಂಘದಿಂದ ಅಯ್ಯಪ್ಪ ಮಹಾಪುಜೆಯಲ್ಲಿ ಮಹಾಪ್ರಸಾದವನ್ನು ಸ್ವೀಕರಿಸುತ್ತಿರುವ ಮಹಿಳೆಯರು.