ಕರ್ನಾಟಕಕ್ಕಿಂತ ಚಿಕ್ಕ ರಾಜ್ಯಗಳಿಗೆ  ಹೆಚ್ಚು  ಹಣ ನೀಡಲಾಗಿದೆ.

ಕರ್ನಾಟಕಕ್ಕಿಂತ ಚಿಕ್ಕ ರಾಜ್ಯಗಳಿಗೆ  ಹೆಚ್ಚು  ಹಣ ನೀಡಲಾಗಿದೆ.

ನವದೆಹಲಿ:  14ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ದೆಹಲಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕರ್ನಾಟಕಕ್ಕಿಂತ ಚಿಕ್ಕ ರಾಜ್ಯವಾದ ಹರಿಯಾಣಕ್ಕೆ ಹೆಚ್ಚು ಹಣ ಕೊಡಲಾಗಿದೆ. ಗುಜರಾತ್ ಮತ್ತು ರಾಜಸ್ಥಾನಕ್ಕೂ ಹೆಚ್ಚು ಹಣ ಕೊಡಲಾಗಿದೆ. ಆದರೆ ಕರ್ನಾಟಕ್ಕೆ ಅನ್ಯಾಯ ಮಾಡಲಾಗಿದೆ’ ಎಂದರು.  ‘ಈ ಬಗ್ಗೆ ನಾನು ಹಲವು ಬಾರಿ ಚರ್ಚಿಸಿದ್ದೇನೆ. ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು.