ಮೋದಿ ಮೇಲೆ ಮಮತಾ ಮತ್ತೆ ವಾಗ್ದಾಳಿ

ಮೋದಿ ಮೇಲೆ ಮಮತಾ ಮತ್ತೆ ವಾಗ್ದಾಳಿ

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಪರೋಕ್ಷವಾಗಿ ಹೋಲಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೋದಿ ಅವರು ಭಾರತೀಯ ನೋಟುಗಳನ್ನು ಮತ್ತೆ ನಿಷೇಧಿಸುವ ಹೊತ್ತಿಗೆ ದೇಶದ ಜನ ಅವರನ್ನೇ ನಿಷೇಧಿಸಿರುತ್ತಾರೆ ಎಂದಿದ್ದಾರೆ.   ನೋಟು ಹಿಂಪಡೆತ ನಿರ್ಧಾರದ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎದುರು ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ ಧರಣಿಯ ವೇಳೆ ಮಾತನಾಡಿದ ಮಮತಾ, ಮೋದಿ ಸರ್ಕಾರ ವಿರೋಧವನ್ನು ಹತ್ತಿಕ್ಕಲು ಭಯೋತ್ಪಾದನಾ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿರುವುದಲ್ಲದೆ, ತಾವು ಮೋದಿ ವಿರೋಧಿ ಪ್ರತಿಭಟನೆಗಳಲ್ಲಿ ಮುನ್ನಲೆಯಲ್ಲಿ ಇರುವುದರಿಂದ ತಮ್ಮನ್ನು ವಿಮಾನ ಪತನ ಮಾಡಿ ಮುಗಿಸುವ ಸಂಚು ರೂಪಿಸಲಾಗಿತ್ತು ಎಂದು ಕೂಡ ದೂರಿದ್ದಾರೆ.