ಹಜರತ್ ಮಹಮ್ಮದ್ ಪೈಗಂಬರರ ಜಯಂತ್ಯೋತ್ಸವ

ಹಜರತ್ ಮಹಮ್ಮದ್ ಪೈಗಂಬರರ ಜಯಂತ್ಯೋತ್ಸವ

ಮುಧೋಳ, 4:  ಹಜರತ್ ಮಹಮ್ಮದ್ ಪೈಗಂಬರರ ಜಯಂತ್ಯೋತ್ಸವನ್ನು ಮುಸ್ಲಿಂ ಸಮುದಾಯದವರು ಅತಂತ್ಯ ಸಂಭ್ರಮದಿಂದ ಆಚರಿಸಿದರು.

ಮುಧೋಳ ನಗರದ ಹಜರತ್ ಸೈಯ್‍ದ ವಲಿ ದರ್ಗಾದಲ್ಲಿ ಸೇರಿಕೊಂಡಿದ, ಮುಸ್ಲಿಂ ಸಮಾಜ ಬಾಂಧವರು ಹಜರತ್ ಮಹಮ್ಮದ್ ಪೈಗಂಬರರ ಸಂಭ್ರದ ಜಯಂತ್ಯೋತ್ಸವ ನಿಮಿತ್ತ ಇಲಿಂದಲೇ ಮೆರವಣಿಗೆಯನ್ನು ಹಮ್ಮಿಕೊಂಡರು, ಅಪಾರ ಜನಸಾಗರದ ನಡುವೆ ಸಾಗಿ ಬಂದ ಮೆರವಣಿಗೆಯು, ಉತ್ತೂರ ಗೇಟ್, ಗಾಂಧಿ ಸರ್ಕಲ್ ಮಾರ್ಗವಾಗಿ, ಶಿವಾಜಿ ಸರ್ಕಲ್ ತಲುಪಿ ಅಲ್ಲಿಂದ ನಗರದ ಉರ್ದು ಶಾಲೆಯವರೆಗೂ ಸಾಗಿಬಂತು. ಈ ಮೆರವಣಿಗೆಯಲ್ಲಿ ಮುಸ್ಲಿಂ ಸಮಾಜ ಭಾಂಧವರು ಹಾಗೂ ಅಪಾರ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಭಾಗಿಯಾಗಿದ್ದರು, ವಾಹನಗಳಲ್ಲಿ ವಿವಿಧ ಮಸೀದಿಗಳ ಪ್ರತಿಕೃತಿ ಕಣ್ಮನ ಸೆಳೆಯುತ್ತಿದ್ದವು. ಅಲ್ಲದೆ ಧ್ವನಿವರ್ದಕಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಗೀತೆಗಳನ್ನು ಹಾಡಲಾಯಿತು. ನಗರದ ಉರ್ದು ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಕ್ಕಳ ಹಾಡುಗಳು ಕೇಳಿ ಬಂದವು. ಸಭೆಯಲ್ಲಿ ಗಣ್ಯರು ಉಪಸ್ಥಿತರಿದ್ದರು. ಈ ಜಯಂತಿಯು ಭಾವ್ಯಕತೆಗೆ ಸಾಕ್ಷಿಯಾಯಿತು.