ಧಾರವಾಡದಲ್ಲಿ ನಾಗರಹಾವು ಪ್ರತ್ಯಕ್ಷ

ಧಾರವಾಡದಲ್ಲಿ ನಾಗರಹಾವು ಪ್ರತ್ಯಕ್ಷ

ಧಾರವಾಡ,ಮೇ.21: : ಇಲ್ಲಿಯ ಕೆಲಗೇರಿ ಗ್ರಾಮದಲ್ಲಿರುವ ಸಿ. ಎಸ್. ಪಾಟೀಲ ಫಾರ್ಮ ಹೌಸ್‍ನಲ್ಲಿ ದೊಡ್ಡ ನಾಗರಹಾವು ಪ್ರತ್ಯಕ್ಷವಾಗಿ ಒಂದು ಘಂಟೆಯವರೆಗೂ ಬುಸುಗುಡುತ್ತಾ, ಹೆಡೆ ಬಿಚ್ಚಿ ಆಡುತ್ತಾ, ಕೆಲಸಗಾರರು   ಭಯಬೀತರಾಗುವಂತೆ ಮಾಡಿತು.
ನಂತರ ಉರಗತಜ್ಞ ಸಾಗರ ಬೆಣಗಿ (ಮೊ: 9916059128) ಅವರನ್ನು ಕರೆಸಿ ಹಾವು ಹಿಡಿಸಿ,  ಭಯಭಕ್ತಿಯಿಂದ ಪೂಜೆ ಸಲ್ಲಿಸಿ ಕಾಡಿಗೆ ಬಿಡಲಾಯಿತು. 
ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಾದ ಸಿ. ಎಸ್. ಪಾಟೀಲ, ನಾರಾಯಣ ಕದಂ, ರಾಜು ಪಾಟೀಲ, ಬಸಪ್ಪ ಮುಗದ, ಕಾರ್ಕಡ, ಹಾಗೂ ಮುದ್ದು ಬಾಲಕರಾದ ಅರುಷಗೌಡ, ಸಂಕಲ್ಪ ಹಾಗೂ ಕಾರ್ಮಿಕರು ಇದ್ದರು.