ಉಪಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭ

ಉಪಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭ

ಬೆಂಗಳೂರು,ಏ.12- ಇಡೀ ರಾಜ್ಯದ ಗಮನವನ್ನೇ ತನ್ನತ್ತ ಸೆಳೆದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಗುಂಡ್ಲುಪೇಟೆ ಹಾಗೂ ನಂಜನಗೂಡು
 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪನವರ ಕುರುಕ್ಷೇತ್ರವೆಂದೇ 
ಬಿಂಬಿತವಾಗಿರುವ ಎರಡು ಕ್ಷೇತ್ರಗಳ ಮತ ಎಣಿಕೆ ನಾಳೆ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು , ಬಹುತೇಕ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.   
ಮತಗಳ ಎಣಿಕೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಕಣದಲ್ಲಿರುವ ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ. 
ವಿಜಯಲಕ್ಷ್ಮಿ ಯಾರ ಕೊರಳಗೆ ಎಂಬುದು ನಾಳೆ ತಿಳಿಯಲಿದೆ.
ಇಂದು ಮತ ಎಣಿಕೆ ಸಮಯ- ಬೆಳಗ್ಗೆ 8 ಗಂಟೆಂಯಿಂದ ಪ್ರಾರಂಭವಾಗಿದ್ದು, ಗುಂಡ್ಲುಪೇಟೆ- ಸೆಂಟ್ಸ್‍ಜಾನ್ ಆಂಗ್ಲ ಮಾಧ್ಯಮ ಶಾಲೆ,
ನಂಜನಗೂಡು -ಜೆಎಸ್‍ಎಸ್ ಪದವಿ ಕಾಲೇಜುಗಳಲ್ಲಿ ಆರಂಭವಾಗಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಸುರುವಾಗಿದೆ.ಪ್ರಮುಖ ಅಭ್ಯರ್ಥಿಗಳಾದ ಬಿಜೆಪಿಯಿಂದ 
ವಿ.ಶ್ರೀನಿವಾಸ್ ಪ್ರಸಾದ್ ಮತ್ತು ನಿರಂಜನ್‍ಕುಮಾರ್,  ಕಾಂಗ್ರೆಸ್ ನಿಂದ ಕಳಲೆ ಕೇಶವಮೂರ್ತಿ ಮತ್ತು ಗೀತಾ ಮಹದೇವಪ್ರಸಾದ್  ನಡುವೆ ಈಗ ಸ್ಪರ್ಧೆ ಏರ್ಪಟ್ಟಿದೆ.

ಇಲ್ಲಿವರೆಗಿನ ಮತದಾನದ ಸರಾಸರಿ ನೋಡಿದರೆ ಗುಂಡ್ಲುಪೇಟೆ – 87.10%, ನಂಜನಗೂಡು – 77.56