ಬೆಂಗಳೂರಿಗಾಗಿ ಬಿಜೆಪಿ ವಿಶೇಷ ಪ್ರಣಾಳಿಕೆಯೊಂದನ್ನು ಇಂದು ಬಿಡುಗಡೆ ಮಾಡಿದೆ. ಮುಖ್ಯವಾಗಿ ಈ ಪ್ರಣಾಳಿಕೆಯಲ್ಲಿ ಬಡವರಿಗೆ ಉತ್ತಮ ಆರೋಗ್ಯ ನೀಡಲು 198 ವಾರ್ಡ್ಗಳಲ್ಲಿ ಮೋದಿ ಕೇರ್ ಆರಂಭ ಮಾಡಲಾಗುವುದು.
ವಿಶೇಷವೆಂದರೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಿರುವ ಬಿಜೆಪಿ ಮಹಾನಗರಕ್ಕೆ ಹತ್ತು ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದೆ.
ಆರೋಗ್ಯ ಕವಚ ಹೆಸರಿನಲ್ಲಿ ಐದು ಲಕ್ಷ ವಿಮೆ, ನಾಗರಿಕರ ರಕ್ಷಣೆಗೆ ರಾಣಿ ಚನ್ನಮ್ಮ ಪಡೆ, ಪ್ರಮುಖ ಜಂಕ್ಷನ್ಗಳಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆ, 2ನೇ ಫೇಸ್ ಮೆಟ್ರೊ ರೈಲು ವಿಸ್ತರಣೆ, ಪ್ರತಿ ವಾರ್ಡ್ಗಳಲ್ಲಿ ಸಿಸಿ ಟಿವಿ ಅಳವಡಿಕ.
ಇವಿಷ್ಟು ಬೆಂಗಳೂರು ನಗರಕ್ಕೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಮುಖ್ಯಾಂಶಗಳು.