ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

ಬಾಗಲಕೋಟೆ ,ಜೂ,14: ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜೂನ್ 15 ರಿಂದ 17ರ ವರೆಗೆ ವಿವಿಧ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. 

    ಜೂನ್ 15 ರಂದು ಜಮಖಂಡಿ ಪಿಡಬ್ಲುಡಿ ನೀರಿಕ್ಷಣಾ ಮಂದಿರ, ಬೀಳಗಿ ಜಿ.ಎಲ್.ಬಿ.ಸಿ ಪ್ರವಾಸಿ ಮಂದಿರ, 16 ರಂದು ಹುನಗುಂದ ಪಿಡಬ್ಲುಡಿ ನಿರೀಕ್ಷಣಾ ಮಂದಿರ, 17 ರಂದು ಬದಾಮಿ ಮತ್ತು ಮುಧೋಳ ಪಿಡಬ್ಲುಡಿ ನಿರೀಕ್ಷಣಾ ಮಂದಿರದಲ್ಲಿ ಬೆಳಿಗ್ಗೆ 10 ರಿಂದ 1.30ರ ವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-236170, 236200ಗೆ ಸಂಪರ್ಕಿಸುವಂತೆ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.