ಸದಾ ಗುಣಾತ್ಮಕ ವಿಚಾರಗಳನ್ನು ಹೊಂದಬೇಕು : ವೀರಣ್ಣ ತೋರವಿ

ಸದಾ ಗುಣಾತ್ಮಕ ವಿಚಾರಗಳನ್ನು ಹೊಂದಬೇಕು : ವೀರಣ್ಣ ತೋರವಿ

ವಿಜಯಪುರ ಡಿ,11 : ಉದ್ಯೋಗ ಮಾಡುವವರು ಸದಾ ಗುಣಾತ್ಮಕ ವಿಚಾರಗಳನ್ನು ಹೊಂದಿರಬೇಕು. ಹಾಗೂ ನಕಾರಾತ್ಮಕದ ಕಡೆ ನಿರ್ಲಕ್ಷಿಸಬೇಕು ಅಂದಾಗ ಉದ್ಯೋಗ ಮಾಡುವವರು ನಿಜವಾಗಿ ಯಶಸ್ಸು ಕಾಣುತ್ತಾರೆ ಎಂದು ಉದ್ಯಮಿದಾರರಾದ ಡಾ. ವೀರಣ್ಣ ತೋರವಿ ಹೇಳಿದರು. 
ಕರ್ನಾಟಕ ಸರ್ಕಾರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, (ಸಿಡಾಕ್) ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ವ್ಯವಹಾರ ಅಭಿವೃದ್ಧಿ ಮಾರ್ಗದರ್ಶಿ 60/40 ಯೋಜನೆಯಡಿ ಆಯ್ಕೇಯಾದ ಪರಿಶಿಷ್ಠಜಾತಿ ಫಲಾನುಭವಿಗಳಿಗೆ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 
ಅನುದಾನ ಉದ್ಯಮ ಬೆಳೆಯುವದಕ್ಕೆ ಮಾತ್ರವಾಗಿದೆ. ಅನುದಾನದಿಂದ ನಾವು ಮುಂದೆ ಬರುತ್ತೇವೆಂದು ಫಲಾನುಭವಿಗಳು ತಿಳಿದುಕೊಂಡರೆ ಅದು ತಪ್ಪು ಕಲ್ಪನೆ.  ಮನುಷ್ಯ ಯಾವಾಗಲೂ ಸದಾ ಕ್ರೀಯಾಶೀಲರಾಗಿರಬೇಕು. ಯಾವುದೇ ರೀತಿಯಾಗಿ ಮನಸ್ಥಾಪಗೊಂಡು, ಅಂಧಕಾರ ಮಾನೋಭಾವದಿಂದ ಚಿಂತಿಸಿದರೆ ಯಾವತ್ತು ಮನುಷ್ಯ ಮುಂದು ಬರಲಾರ. ಮನುಷ್ಯನಲ್ಲಿ ದುಡಿಯುತ್ತೇನೆಂದು ಮನೋಭಾವ ಇರಬೇಕು. ನಕಾರಾತ್ಮಕ ಭಾವನೆಯಿಂದ ದುಡಿದರೆ ಉದ್ಯಿಮಿದಾರ ಯಶಸ್ಸುಗಾರನಾಗಲು ಸಾಧ್ಯ ಎಂದು ಹೇಳಿದರು. 
ಸಿಡಾಕ್ ಜಂಟಿ ನಿರ್ದೇಶಕಿ ಎಸ್.ಬಿ. ಬಳ್ಳಾರಿ ಅತಿಥಿಸ್ಥಾನ ವಹಿಸಿ ಮಾತನಾಡಿ, ತರಬೇತಿ ಪ್ರಮಾಣ ಪತ್ರಕ್ಕಾಗಿ ಮಾತ್ರ ಪಡೆಯದೇ ಅದರ ಸದುಪಯೋಗ ಪಡೆದುಕೊಂಡು, ಸರ್ಕಾರದಿಂದ ಲಾಭ ಪಡೆಯಬೇಕು. ಸರ್ಕಾರ ಮೇಲಿಂದ ಮೇಲೆ ಜನರಿಗಾಗಿ ವಿಶೇಷ ಯೋಜನೆಗಳು ಜಾರಿಗೆ ಮಾಡುತ್ತಿದೆ, ಆದರೆ ಫಲಾನುಭವಿಗಳು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಅಂದಾಗ ಮಾತ್ರ ಯೋಜನೆ ಉಪಯೋಗವಾಗುವುದು. ಫಲಾನುಭವಿಗಳಾದ ತಾವುಗಳು ಯೋಜನೆ ಸದ್ಭಳಕೆ ಮಾಡಿಕೊಂಡು ಬೇರೆಯವರಿಗೆ ಮಾದರಿಯಾಗಬೇಕೆಂದು ಫಲಾನುಭವಿಗಳಿಗೆ ತಿಳಿಸಿದರು. 
ಈ ಸಂದರ್ಭದಲ್ಲಿ ರುಕ್ಮಣಿ ಚವ್ಹಾಣ, ಸುನಂದ ಮಾದರ, ರಾಘವೇಂದ್ರ ಗೊಳಸಂಗಿ ಮುಂತಾದ ಫಲಾನುಭವಿಗಳು 3 ದಿನಗಳ ಅಧ್ಯಯನ ತರಬೇತಿ ಪಡೆದ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. 
ಸುನಂದಾ ಮಾದರ ಸ್ವಾಗತ ಪ್ರಾರ್ಥನೆಗೈದರು. ವಿಠ್ಠಲ ನಡುವಿನಕೇರಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ವಂದಿಸಿದರು.