ಮಲಘಾಣ ಪಶ್ಚಿಮ ಕಾಲುವೆಗೆ ನೀರು : 40 ಕಿಮೀ ದೂರ ದೀರ್ಘದಂಡ ನಮಸ್ಕಾರ

ಮಲಘಾಣ ಪಶ್ಚಿಮ ಕಾಲುವೆಗೆ ನೀರು : 40 ಕಿಮೀ ದೂರ ದೀರ್ಘದಂಡ ನಮಸ್ಕಾರ

ವಿಜಯಪುರ,ಅ.10: ಮುಳವಾಡ ಏತ ನೀರಾವರಿ ಯೋಜನೆ ಮಲಘಾಣ ಪಶ್ಚಿಮ ಕಾಲುವೆಗೆ 0-92 ರವರೆಗೆ ವಿಜಯಪುರ ಹಾಗೂ ಬಸವನಬಾಗೇವಾಡಿ ತಾಲೂಕಿನ ಜಮೀನುಗಳಿಗೆ ನೀರು ಹರಿಸಿದ ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲರಿಗೆ ಅಭಿನಂದನೆ ಸಲ್ಲಿಸಲು ಹಾಗೂ ಭಗವಂತ ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ, ಅಧಿಕಾರ ನೀಡಿ, ಜನತೆಗೆ ಹೆಚ್ಚಿನ ಸೇವೆ ಸಲ್ಲಿಸಲು ಹರಸಿ ಕಂಬಾಗಿಯಿಂದ ವಿಜಯಪುರದ ಶ್ರೀ ಸಿದ್ಧೇಶ್ವರ ದೇವಸ್ಥಾನದವರೆಗೆ ಧೀರ್ಘದಂಡ ನಮಸ್ಕಾರಗಳನ್ನು ಸಲ್ಲಿಸಿದನು. 
ಕಂಬಾಗಿ ಗ್ರಾಮದ ಯುವಕ ಗುರು ಲಕ್ಕಪ್ಪ ದಳವಾಯಿ (25), ಸಚಿವ ಎಂ.ಬಿ.ಪಾಟೀಲರವರು ಮಾಡಿರುವ ಜನಪರ ಕಾರ್ಯಗಳನ್ನು ಮೆಚ್ಚಿ, ಬಬಲೇಶ್ವರ ಕ್ಷೇತ್ರದಲ್ಲಿ ನೀರು ಹರಿಸಿದರೆ ವಿಜಯಪುರದ ಕಾಯಕ ಯೋಗಿ ಸಿದ್ಧರಾಮೇಶ್ವರನಿಗೆ ಧೀಡ ನಮಸ್ಕಾರಗಳನ್ನು ಸಲ್ಲಿಸುತ್ತೇನೆ ಎಂದು ಬೇಡಿಕೊಂಡಿದ್ದನು. ಅದರ ಪ್ರಕಾರ ಮುಳವಾಡ ಏತ ನೀರಾವರಿಯ ಪಶ್ಚಿಮ ಕಾಲುವೆಯಿಂದ ಮಸೂತಿಯಿಂದ ತಿಗಣಿಬಿದರಿವರೆಗೆ 0-92 ಕಿ.ಮೀ ವರೆಗೆ ನೀರು ಹರಿಸಿರುವ ಪ್ರಯುಕ್ತ ಸೋಮವಾರ ಬೆಳಗಿನ ಜಾವ 3ಗಂ. ಸ್ವಗ್ರಾಮ ಕಂಬಾಗಿಯ ಮಾರುತಿ ದೇವಾಲಯದಿಂದ ಬಬಲೇಶ್ವರ ಮಾರ್ಗವಾಗಿ ವಿಜಯಪುರದ ಸಿದ್ಧೇಶ್ವರ ದೇವಸ್ಥಾನದವರೆಗೆ ಅಂದಾಜು 40 ಕಿಮೀ ದೂರದ ವರೆಗೆ ಧೀಡ ನಮಸ್ಕಾರ ಸಲ್ಲಿಸಿದ್ದಾನೆ. 
ಬೆಳಗಿನ 6ಗಂ. ಬಬಲೇಶ್ವರದಲ್ಲಿ ಗುರು ದಳವಾಯಿಯವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಜಿ.ಪಂ.ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ ಸ್ವಾಗತಿಸಿ, ಅಭಿನಂದಿಸಿ ಬೀಳ್ಕೋಟ್ಟರು. ಮಾರ್ಗ ಮಧ್ಯ ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲರ ಸಹೋದರಿ ಕಲ್ಪನಾ ಮಹೇಶ ಪಾಟೀಲ ಭೇಟಿ ಮಾಡಿ ಅಭಿನಂಧಿಸಿದರು. ವಿಜಯಪುರ ಸಿದ್ಧೇಶ್ವರ ದೇವಸ್ಥಾನದಲ್ಲಿ ಬಿ.ಎಲ್.ಡಿ.ಇ ನಿರ್ದೇಶಕ ಸುನೀಲಗೌಡ ಪಾಟೀಲ ದಂಪತಿಗಳು ಗುರು ದಳವಾಯಿಯವರನ್ನು ಸ್ವಾಗತಿಸಿ ಸನ್ಮಾನಿಸಿದರು. 
ಈ ಸಂದರ್ಭದಲ್ಲಿ ಯುವ ಮುಖಂಡ ಅಪ್ಪುಗೌಡ ಪಾಟೀಲ ಶೇಗುಣಸಿ, ಧರ್ಮಣ್ಣ ಸಿಂಗೆ, ಸಿದ್ದಪ್ಪ ತಳೆವಾಡ, ಪರಮಾನಂದ ಕುಮಟಗಿ, ಹನಮಂತ ದಳವಾಯಿ, ನಾಗಪ್ಪ ದಳವಾಯಿ, ಷಣ್ಮುಖ ಮೇಲ್ಗಡೆ, ಸದಾಶಿವ ಸೊನ್ನದ, ಪ್ರೇಮಾ ಮೋಳೆ, ವಿ.ಎನ್.ಪಾಟೀಲ ನಾಗರಾಳ, ಯಮನಪ್ಪ ಸಿದ್ದರೆಡ್ಡಿ, ಸುಭಾಷ ಕಾರಜೋಳ, ಕುತ್ಬುದಿನ ಅತನೂರ, ಮಹಾಂತೇಶ ಮಲ್ಲಣ್ಣವರ, ಮಹಾದೇವ ಮಠ, ಮಂಜು ಎಮ್ಮೆನವರ ಮತ್ತಿತರರು ಉಪಸ್ಥಿತರಿದ್ದರು.