ಬಳಕೆಯಾಗಬೇಕಾದ ನೀರು ವ್ಯರ್ಥ: ಸ್ಥಳೀಯರ ಆಕ್ರೋಶ

ಬಳಕೆಯಾಗಬೇಕಾದ ನೀರು ವ್ಯರ್ಥ: ಸ್ಥಳೀಯರ ಆಕ್ರೋಶ

ಮುಧೋಳ, ಡಿ.4: ನಗರದ ವಾರ್ಡ-ನಂ-10ರಲ್ಲಿ ಅಧಿಕಾರಿಗಳ ಆಲಸ್ಯದಿಂದಾಗಿ, ಬಳಕೆಯಾಗಬೇಕಾದ ನೀರು ವ್ಯರ್ಥ ಪೊಲಾಗಿ ಹೋಗುತ್ತಿರುವುದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮುಧೋಳ ನಗರದ ವಾರ್ಡ ನಂ-10ರಲ್ಲಿ, ಲಿಂಗ ಮಠದ ಹತ್ತಿರ ಪೈಪ್ ಒಡೆದು ಸಾರ್ವಜನಿಕರಿಗೆ ಬಳಕೆಯಾಗಬೇಕಾದ ನೀರು ವ್ಯರ್ಥವಾಗಿ ಪೊಲಾಗುತ್ತಿರುವುದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿ ಬಾರಿ ಕೆರೆಯ ನೀರು ಬಿಟ್ಟಾಗ ಈ ಅವಘಡ ಸಂಭವಿಸುತ್ತಿದ್ದು, ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನು ಪ್ರಯೋಜನವಾಗಿಲ್ಲ, ಎಂಬುದು ಸ್ಥಳೀಯರ ವಾದ, ವಾರ್ಡನಂ-11ರ ಸದಸ್ಯೆ ತಾಕಾಬಾಯಿ ಹಾದಿಮನಿ ಯವರ ಗಮನಕ್ಕೆ ಈ ವಿಷಯ ತಂದಿದ್ದು ಪ್ರಯೋಜನವಾಗಿಲ್ಲ, ಎಂಬುದಾಗಿ ತಿಳಿದು ಬಂದಿದೆ. ಈ ಸಂದರ್ಭದಲ್ಲಿ -ಸ್ಥಳೀಯರಾದ ಸ್ಯೆಯದ ಭಾಷಾ ಬಾಗವಾನ ಮಾತನಾಡಿ, ಬೇಸಿಗೆಯಲ್ಲಿ 30 ದಿನಗಳಿಗೊಮ್ಮೆ ನೀರು ಬಿಡುತ್ತಾರೆ, ಇಂತಹ ಸಂದರ್ಭದÀಲ್ಲಿ, ಈ ರೀತಿ ನೀರು ವ್ಯರ್ಥವಾಗಿ ಪೊಲಾಗುತ್ತಿದ್ದು, ಸಂಭಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ರೀತಿ ನೀರು ಹಾಳಾಗಿ ಹೋಗುತ್ತಿರುವುದು ದುರ್ದೈವದ ಸಂಗತಿ, ಎಂದು ಹೇಳಿದರು.