17 ರಂದು ವಿಶ್ವಕರ್ಮ, 21 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ

17 ರಂದು ವಿಶ್ವಕರ್ಮ, 21 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ

ಬಾಗಲಕೋಟೆ ಸೆ,12 : ಜಿಲ್ಲೆಯಲ್ಲಿ ಸೆಪ್ಟೆಂಬರ 17 ರಂದು ವಿಶ್ವಕರ್ಮ ಹಾಗೂ 21 ರಂದು  ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.
    ಜಿಲ್ಲಾಡಳಿತ ಭವನದಲ್ಲಿರುವ ವಿಡಿಯೋ ಕಾನ್ಪರೆನ್ಸ್ ಹಾಲ್‍ನಲ್ಲಿ ಈ ಕುರಿತು ಹಮ್ಮಿಕೊಂಡ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೆಪ್ಟೆಂಬರ 17 ರಂದು ರಂದು ಬೆಳಿಗ್ಗೆ 9ಕ್ಕೆ ಜಿಲ್ಲಾಡಳಿತ ಆವರಣದಿಂದ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆ ನಂತರ ನವನಗರದ ಕಲಾಭವನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಾಗುವುದು ಎಂದರು. ಅತಿಥಿ ಉಪನ್ಯಾಸಕರಾಗಿ ಖಾನಾಪೂರದ ಡಾ.ವೃಷಬೇಂದ್ರಾಚಾರ್ಯ ಅರ್ಕಸಾಲಿ ಅವರನ್ನು ಆಹ್ವಾನಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳನ್ನು ಆಹ್ವಾನಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಿಳಿಸಲಾಯಿತು.
    ಸೆಪ್ಟೆಂಬರ 21 ರಂದು ಸಾಯಂಕಾಲ ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವದಲ್ಲಿ ಬ್ರಹ್ಮಶ್ರೀ ನಾರಾಯನ ಗುರುಗಳ ಜಯಂತಿ ಆಚರಿಸಲು ನಿರ್ಧರಿಸಲಾಯಿತು. ಅತಿಥಿ ಉಪನ್ಯಾಸಕರಾಗಿ ಎಂ.ಓ.ಮಮತೇಶ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. ವಿದೇಶದಲ್ಲಿ ಸಾಂಸ್ಕøತಿ ಕಾರ್ಯಕ್ರಮ ನೀಡಿದ ಸಮುದಾಯದ ಪೂಜಾ ಈಳಗೇರ ಅವರಿಂದ ಹಚ್ಚೇವು ಕನ್ನಡದ ದೀಪ ಎಂಬ ಸಾಂಸ್ಕøತಿ ಕಾರ್ಯಕ್ರಮ ನೀಡಲು ಅವಕಾಶ ನೀಡುವಂತೆ ಸಮುದಾಯದ ಮುಖಂಡರು ಸಭೆಯಲ್ಲಿ ಕೋರಲಾಯಿತು. ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಅನುಮತಿ ನೀಡಲಾಗುವುದೆಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
    ವೇದಿಕೆ ಹಾಗೂ ಮೆರವಣಿಗೆಯ ಮಾರ್ಗ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಕಾರ್ಯಕ್ರಮದಲ್ಲಿ ಸಮುದಾಯ ಜನತೆ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹಾಗೂ ಆಯಾ ತಾಲೂಕಾ ಕೇಂದ್ರದಲ್ಲಿ ವಿಶ್ವಕರ್ಮ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವಂತೆ ನಿರ್ದೇಶನ ನೀಡಲಾಗುವುದೆಂದರು. 
    ಸಭೆಯಲ್ಲಿ ಮುರನಾಳ ಮಳೆಯರಾಜೇಂದ್ರ ಮಹಾಮಠದ ಜಗನ್ನಾಥ ಶ್ರೀಗಳು, ಎಂ.ಡಿ.ಮಾಯಾಚಾರಿ, ಗಂಗಾಧರ ಪತ್ತಾರ, ಮೌನೇಶ ಪತ್ತಾರ, ಗಂಗಾಧರ ಗಂಗೂರ, ನಾಗೇಶ ಬರಗಿ, ವಿ.ವಿ.ಪತ್ತಾರ, ಅನ್ನಪ್ಪ ಕಂಕಸಾಲಿ, ಕೆ.ಸತ್ಯನಾರಾಯಣ, ಶಿವಪುತ್ರಪ್ಪ ಕಲಕೇರಿ, ಚಂದ್ರಕಾಂತ, ಮಹಾಂತೇಶ ಈಳಗೇರ, ಮುತ್ತುರಾಜ ಕರಡಿ, ಬಾಲರಡ್ಡಿ ಈಳಗೇರ, ಪಾಂಡಪ್ಪ ಈಳಗೇರ, ಅಶೋಕ ಕರಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಕಂದಾಯ ಇಲಾಖೆಯ ಎಂ.ಬಿ.ಗುಡೂರ ವಂದಿಸಿದರು.