ಮೌಲ್ಯಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆ

 ಮೌಲ್ಯಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆ

ವಿಜಯಪುರ ಆ,29: ಭಾರತದ ರಾಜಕೀಯ ರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ದೇಶ ಕಂಡ ಶ್ರೇಷ್ಠ ಮತ್ತು ಮೌಲ್ಯಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆಯೆಂದು ಬ್ಯಾಂಕರ್ಸ್ ಕಾಲೋನಿಯ ಹಿರಿಯರಾದ ಲಕ್ಷ್ಮಣ ರಾಠೋಡ ಅವರು ಹೇಳಿದರು.   
    ನಗರದ ಬ್ಯಾಂಕರ್ಸ ಕಾಲನಿಯಲ್ಲಿ ನಡೆದ ಜೀವನಾಡಿ ಕರ್ನಾಟಕ ಸಾಹಿತ್ಯ ವೇದಿಕೆ (ರಿ) ಹಾಗೂ ಭಾರತ ಯುವ ವೇದಿಕೆ ಹಮ್ಮಿಕೊಂಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ 92ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು ಹೆಗಡೆಯವರು ಅವರ ಆಡಳಿತದಲ್ಲಿ ಮಾಡಿದ ವಿಧವಾ ವೇತನ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ಬೋರ್‍ವೆಲ್ ವ್ಯವಸ್ಥೆ ಮತ್ತು ವೃದ್ಧಾಪ್ಯವೇತನದಂತಹ ಸರ್ವಕಾಲೀಕ ಕೆಲಸಗಳನ್ನು ಮಾಡಿದ ದೀಮಂತ ನಾಯಕ ಎಂದು ಇದೇ ಸಂದರ್ಭದಲ್ಲಿ ಸ್ಮರೀಸಿದರು. 
    ಮುಖ್ಯ ಅತಿಥಿಗಳಾಗಿ ಪ್ರೊ. ಅಮರೇಶ ಸಾಲಕ್ಕಿ ಮಾತನಾಡಿದ ಅವರು ಹೆಗಡೆಯವರು ಅಧಿಕಾರಕ್ಕಾಗಿ ಎಂದೂ ಹಾತೋರೆದವರಲ್ಲ ಅಧಿಕಾರವೇ ಅವರ ಬಳಿ ಬಂದಾಗ ಜನರ ನಾಡಿ ಮಿಡಿತ ಅರಿತು ಉತ್ತಮ ಮತ್ತು ಸ್ವಚ್ಛ ಆಡಳಿತವನ್ನು ನೀಡಿದ್ದಾರೆ. ಇಂದಿನ ರಾಜಕಾರಣದಲ್ಲಿ ಬರೀ ಕಲುಷಿತ ವಾತಾವರಣವೇ ತುಂಬಿ ಹೋಗಿವೆ. ಇದಕ್ಕಾಗಿಯೇ ಹೆಗಡೆಯವರು ಅವರ ಆಡಳಿತದಲ್ಲಿ ಲೋಕಾಯುಕ್ತವನ್ನು ಜಾರಿಗೆ ತಂದರು ಮತ್ತು ಅಧಿಕಾರದ ವಿಕೇಂದ್ರಿಕರಣವನ್ನು ಮಾಡಿದರು. ಎಂದು ಹೇಳಿದರು.
    ಸ್ವಾಮಿವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ, ಸಾಹಿತಿ ಕನ್ನಡ ಪರ ಹೋರಾಟಗಾರ ಶ್ರೀ ಸಂತೋಷಕುಮಾರ ಎಸ್. ನಿಗಡಿ ಮಾತನಾಡಿದ ಅವರು ಹೆಗಡೆಯವರು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಮಾಡಿದ ಕಾರ್ಯ ಶ್ಲಾಘನೀಯ ಮತ್ತು ದೂರದೃಷ್ಟಿತ್ವ ಹೊಂದಿದ ಸಾಮಾನ್ಯನು ಕೂಡಾ ಅಧಿಕಾರವನ್ನು ಪಡೆದುಕೊಂಡು ಉತ್ತಮ ಆಡಳಿತ ಕೊಡವಂತಾಗಬೇಕೆಂದು ಅವರ ಮಹಾದಾಸೆಯಾಗಿತ್ತು. ಜಾತಿ ರಾಜಕಾರಣ ಎಂದೂ ಮಾಡಿದವಲ್ಲ. ಈಗ ಕರ್ನಾಟಕದಲ್ಲಿ ಆಡಳಿತ ನಡೆಸುವ ಹಲವಾರು ಮಂತ್ರಿವರ್ಯರು ಹೆಗಡೆಯವರು ಸಾಕಿ ಬೆಳೆಸಿದ ನಾಯಕರೆ ಆಗಿದ್ದಾರೆ. ಎಂದು ತಿಳಿಸಿದರು.
        ಈ ಕಾರ್ಯಕ್ರಮದಲ್ಲಿ ಬ್ಯಾಂಕರ್ಸ ಕಾಲನಿಯ ಶ್ರೀ ಶಿವಾನಂದ ಚಾಳಿಕಾರ, ಸಂತೋಶ ಹಾಲಳ್ಳಿ, ಶರಣಬಸಪ್ಪ ಇಂಗಳೇಶ್ವರ, ಸಚಿನ ಒಳಸಂಗ, ಮಲಕಾರಿಸಿದ್ದ ಸಾಹುಕಾರ, ಇನ್ನಿತರು ಈ ಕಾರ್ಯಕ್ರಮದಲ್ಲಿ ಹಾಜಿರಿದ್ದರು.
ಕಾರ್ಯಕ್ರಮ ನಿರೂಪಣೆ  ಶ್ರೀ ಮುತ್ತು ಅಥರ್ಗಾ, ಸ್ವಾಗತ ಸಿದ್ರಾಮ ಬಡಿಗೇರ, ವಂದನಾರ್ಪಣೆ ಸತೀಶ ಆಹೇರಿ,