ಯುಕೆಪಿ : ಅಹವಾಲು ಸ್ವೀಕಾರ

ಯುಕೆಪಿ : ಅಹವಾಲು ಸ್ವೀಕಾರ

ಬಾಗಲಕೋಟೆ, ನ. 9: ತಾಲೂಕಿನ ಕಲಾದಗಿ ಗ್ರಾಮ ಸೋರಕೊಪ್ಪ ಗ್ರಾಮದ ಜಮೀನುಗಳು ಎಫ್‍ಆರ್‍ಎಲ್:519.60 ಮೀ. ದಿಂದ 524.256 ಮೀ ಹಿನ್ನೀರಿನಲ್ಲಿ ಭೂಸ್ವಾಧೀನವಾಗುವ ಕೆಲವು ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುತ್ತಿದ್ದು, ಭೂಸ್ವಾಧೀನ ಕಾಯ್ದೆ 2013ರ ಕಲಂ 16(2) ಕರಡು ಯಾದಿಯ ಪ್ರಕಾರ ನವೆಂಬರ 14 ರಂದು ಬೆಳಿಗ್ಗೆ 11.30 ಗಂಟೆಗೆ ಕಲಾದಗಿ ಗ್ರಾ.ಪಂ.ದಲ್ಲಿ ಹಾಗೂ ನವೆಂಬರ 16 ರಂದು ಸೋರಕೊಪ್ಪ ಗ್ರಾಪಂ.ದಲ್ಲಿ ಭೂಸ್ವಾಧೀನವಾಗುವ ಜಮೀನುಗಳ ವಯಸ್ಕರ ಸದಸ್ಯರ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಯುಕೆಪಿಯ ಆಡಳಿತಾಧಿಕಾರಿಗಳು ಹಾಗೂ ಪದನಿಮಿತ್ಯ ಪುನರ್ವಸತಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.