ರಾಜ್ಯದಲ್ಲಿ ವೈದ್ಯರ ಮುಷ್ಕರದಿಂದಾಗಿ ಇಬ್ಬರು ಬಲಿ

ರಾಜ್ಯದಲ್ಲಿ ವೈದ್ಯರ ಮುಷ್ಕರದಿಂದಾಗಿ ಇಬ್ಬರು ಬಲಿ

ಹಾಸನ ,ನ.14: ರಾಜ್ಯದಲ್ಲಿ ಖಾಸಗಿ ವೈದ್ಯರ ಮುಷ್ಕರದಿಂದಾಗಿ ಸೂಕ್ತ ಚಿಕಿತ್ಸೆ ಲಭಿಸದೇ ಮೂರು ತಿಂಗಳ ಮಗು ಬಲಿಯಾಗಿದೆ.  ಸಿದ್ದಯ್ಯನಗರದ  ನದೀಮ್ ಪಾಷಾ- ಫರಾನಾ ದಂಪತಿಯ ಮಗು ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದೆ.

ಕೆಲ ದಿನಗಳಿಂದ ಉಸಿರಾಟದ ತೊಂದರೆಯಿಂದ ಮಗು ಬಳಲುತ್ತಿತ್ತು.  ತಿಪಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಸಿಗದ ಕಾರಣ ತಿಪಟೂರಿನಿಂದ ಹಾಸನಕ್ಕೆ ಬೆಳಗ್ಗೆ ಕರೆತರುವ ವೇಳೆ ಮಾರ್ಗಮಧ್ಯದಲ್ಲಿಯೇ ಮಗು ಸಾವನ್ನಪ್ಪಿದೆ.ಹಾಸನದ ಸಿದ್ದಯ್ಯನಗರದ ಮನೆಯಲ್ಲಿ ದಂಪತಿಯ ರೋದನ ಮುಗಿಲು ಮುಟ್ಟಿದೆ.

ವೈದ್ಯರ ಮುಷ್ಕರದಿಂದಾಗಿ ಸೂಕ್ತ ಚಿಕಿತ್ಸೆ ಸಿಗದೇ  ಕೊಪ್ಪಳದಲ್ಲಿ ಪಿಡಿಒ ಗ್ಯಾನಪ್ಪ ಬಡ್ನಾಳ (56) ಮೃತಪಟ್ಟಿದ್ದಾರೆ. ಇಂದು ಬೆಳಗಿನ ವೇಳೆ ಗ್ಯಾನಪ್ಪ ಬಡ್ನಾಳಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಬಂದಿದ್ದ ಅವರಿಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ.  ತಕ್ಷಣವೇ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ಕರೆ ತಂದರೂ ಆಸ್ಪತ್ರೆ ಬಾಗಿಲು ಮುಚ್ಚಿ ವೈದ್ಯರು  ಮುಷ್ಕರಕ್ಕೆ ತೆರಳಿದ್ದರಿಂದ  ಗ್ಯಾನಪ್ಪಗೆ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ.

ಗಾಂಧಿ ಜಯಂತಿಯಂದು 3-4 ಲಕ್ಷ ವೈದ್ಯರಿಂದ ಉಪವಾಸ ನಿರಶನ; ವೈದ್ಯರ ಬೇಡಿಕೆಗಳೇನು?ಖಾಸಗಿ ವೈದ್ಯಕೀಯ ತಿದ್ದುಪಡಿ ಕಾಯ್ದೆ ಖಂಡಿಸಿ ನಾಳೆ ರಾಜ್ಯಾದ್ಯಂತ ವೈದ್ಯರ ಮುಷ್ಕರಅಧಿವೇಶನದ ಮೊದಲ ದಿನವೇ ಬರ ಪರಿಸ್ಥಿತಿ ಚರ್ಚೆಗೆ ಗೈರಾದ ಸಚಿವರು, ಶಾಸಕರು