ಈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತ ಸಾವು ಖಚಿತ

ಈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತ ಸಾವು ಖಚಿತ

ಬೀದರ್,ಸೆ.28: ಇದು ಬೀದರ್ ಜಿಲ್ಲೆ ಔರಾದ್ ತಾಲೂಕಿನ ತೋರಣ ಗ್ರಾಮದ ಸರ್ಕಾರಿ ಆಸ್ಪತ್ರೆ. ಹೆಸರಿಗೆ ಆಸ್ಪತ್ರೆ ರೋಗಿಗಳ ಪಾಲಿಗೆ ನರಕ ಕೂಪ. ಯಾಕಂದ್ರೆ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಇಲ್ಲಿ ನರ್ಸಗಳೇ ಎಲ್ಲ. 12 ಸಾವಿರ ಜನಸಂಖ್ಯೆ ಹೊಂದಿರುವ ತೋರಣಾದಲ್ಲಿ ಇರೋದು ಇದೊಂದೇ ಆಸ್ಪತ್ರೆ. ಆಸ್ಪತ್ರೆಯಲ್ಲಿ 10 ಬೆಡ್​ಗಳೂ ಇವೆ. ಆದರೆ, ಇರುವ ಒಬ್ಬ ವೈದ್ಯ ವಾರಕ್ಕೊಮ್ಮೆಯೂ ಬರಲ್ಲ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿ ತಿಂಗಳು ಹತ್ತರಿಂದ ಹದಿನೈದು ಗಭಿರ್ಣಿಯರು ಈ ಆಸ್ಪತ್ರೆಗೆ ಬರ್ತಾರೆ. ಡಾಕ್ಟರ್ ಸಿಗದೇ ನರ್ಸ್​ಗಳೇ ಇಲ್ಲಿ ಡಾಕ್ಟರ್ ರೀತಿ ಚಿಕಿತ್ಸೆ ನೀಡ್ತಾರೆ. ಒಂದ್ ವೇಳೆ ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ ಅನ್ನೋದು ಸಾರ್ವಜನಿಕರ ಪ್ರಶ್ನೆ.

ಇನ್ನೂ ಇಲ್ಲಿ ಆಸ್ಪತ್ರೆಗಾಗಿ ಹೊಸ ಕಟ್ಟಡ ಕಟ್ಟಲಾಗಿದೆ. ಅದೂ ಕಾಮಗಾರಿ ಮುಗಿಯದೇ ಅರ್ಧಕ್ಕೇ ನಿಂತಿದೆ. ಒಟ್ಟಿನಲ್ಲಿ ಇಲ್ಲಿ ಆಸ್ಪತ್ರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂಥಾಗಿದೆ. ಆರೋಗ್ಯ ಸಚಿವರೇ ಈ ಆಸ್ಪತ್ರೆ ಇನ್ನಾದ್ರೂ ಟ್ರೀಟ್​ಮೆಂಟ್ ಕೊಡಿಸಿ.