ಸಂಸ್ಕøತಿಯ ಮೂಲವಾದ ಜಾನಪದದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು.-ಡಾ.ಬಾಲಾಜಿ

ಸಂಸ್ಕøತಿಯ ಮೂಲವಾದ ಜಾನಪದದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು.-ಡಾ.ಬಾಲಾಜಿ

ಬಾಗಲಕೋಟ,ಅ.7: ನಮ್ಮ ಸಂಸ್ಕøತಿಯ ಮೂಲ ಬೇರಾದ ಜಾನಪದದ ಪರಿಚಯ ಹಾಗೂ ಜಾಗೃತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಅಗತ್ಯ ಇಂದು ಹೆಚ್ಚಾಗಿದ್ದು ಅದಕ್ಕಾಗಿ ಕನ್ನಡ ಜಾನಪದ ಪರಿಷತ್ತು ರಾಜ್ಯದ ಎಲ್ಲಾ ಶಾಲೆ ಕಾಲೇಜುಗಳಲ್ಲಿ ‘ವಿಕಾಸಕ್ಕಾಗಿ ಜಾನಪದ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಜಾಪ ರಾಜ್ಯ ಕಾರ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.
    ಅವರು ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ಮಿನಿಸಭಾಭವನದಲ್ಲಿ ‘ವಿಕಾಸಕ್ಕಾಗಿ ಜಾನಪದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
    ವಿದ್ಯಾರ್ಥಿಗಳು ಆಧುನಿಕತೆಯ ಸಂದರ್ಭದಲ್ಲಿ ಜಾನಪದವನ್ನು ಮರೆಯುತ್ತಿದ್ದು ಕಲೆ ಸಂಸ್ಕøತಿಯೊಂದಿಗೆ ಉತ್ತಮ ಸಂಸ್ಕಾರನ್ನು ಹೊಂದಲು ಜಾನಪದವನ್ನು ಅರಿಯಬೇಕಾಗಿದೆ ಎಂದರು.’ಆಧುನಿಕ ಸಂದರ್ಭ ಮತ್ತು ಜಾನಪದ ಪರಂಪರೆ’ ಕುರಿತು ಉಪನ್ಯಾಸ ನೀಡಿದ ಲೇಖಕಿ ಸೀಮಾ ಹುಲಿಕಟ್ಟಿ ಜಾನಪದವೂ ಎಲ್ಲ ಜ್ಞಾನಗಳ ಮೂಲ ತವರು ಮನೆಯಾಗಿದೆ.
    ಜನರ ನಂಬಿಕೆ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳು ಅಡಕವಾಗಿದ್ದು ಮಾನವತೆಯ ಬಹು ದೊಡ್ಡ ಮೌಲ್ಯವನ್ನು ಜಾನಪದ ಬಿತ್ತುತ್ತಿದೆ ಎಂದರು.
    ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ.ಪಿ.ಎಸ್.ಆಲೂರ ಮಾತನಾಡಿ ‘ಪಠ್ಯ ಜ್ಞಾನದೊಂದಿಗೆ ಪಠ್ಯಪೂರಕ ಜ್ಞಾನವನ್ನು ವಿದ್ಯಾರ್ಥಿಗಳು ವಿಸ್ತರಿಸಿಕೊಳ್ಳಲು ‘ವಿಕಾಸದೆಡೆಗೆ ಜಾನಪz’À ಕಾರ್ಯಕ್ರಮವು ಒಂದು ಒಳ್ಳೆಯ ಪ್ರಯತ್ನವಾಗಿದೆವೆಂದರು. 
    ಕಜಾಪ ತಾಲೂಕು ಅಧ್ಯಕ್ಷ ವೀರಣ್ಣ ಬಳಿಗಾರ ಸ್ವಾಗತಿದರು.ಉಪನ್ಯಾಸಕಿ ಗೀತಾ ಕುಲಕರ್ಣಿ ನಿರೂಪಿಸಿದರು. ಉಪನ್ಯಾಸಕ ಎ.ಬಿ.ಕೊಣ್ಣೂರ ವಂದಿಸಿದರು. ಡಾ.ಬಾಲಾಜಿ ಮತ್ತು ಡಾ.ಪಿ.ಎಸ್.ಆಲೂರ ಅವರನ್ನು ಜಿಲ್ಲಾ ಕಜಾಪ ವತಿಯಿಂದ ಸನ್ಮಾನಿಸಲಾಯಿತು.
    ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಡಾ.ಪ್ರಕಾಶ ಖಾಡೆ ಆಶಯ ನುಡಿ ಹೇಳಿದರು.ಎಸ್.ಎಸ್.ಅಥಣಿ, ಎಸ್.ಜಿ.ತೇಲಿ ಉಪಸ್ಥಿತರಿದ್ದರು.