ರೈತರ  ಅಹೋರಾತ್ರಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ರೈತರ  ಅಹೋರಾತ್ರಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ವಿಜಯಪುರ,ಜೂ.7:  ರಾಜ್ಯದ ರೈತರ ಜಮೀನುಗಳ ದಾರಿ ಸಮಸ್ಯೆ ಹಾಗೂ ಜಮೀನುಗಳ ಸರ್ವೆ ಕಾರ್ಯ ಹಾಗೂ ರೈತರ ಸಾಲ ಮನ್ನಾ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ 
ಸಂಘ,ವಿಜಯಪುರ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಯಿತು.

    ಬೆಳಿಗ್ಗೆ 11.30 ಗಂಟೆಗೆ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ 
ಸಲ್ಲಿಸಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಯಿತು. 

    ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡುತ್ತ, ರಾಜ್ಯಾದ್ಯಂತ ರೈತರು ತಮ್ಮ ತಮ್ಮ ಜಮೀನಿಗೆ ಹೋಗಿ ಬರಲು ದಾರಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,
  ದಾರಿ ವಿಷಯವಾಗಿ ಹಲವಾರು ಕಡೆ ರೈತರ ಮದ್ಯೆ ಹೊಡೆದಾಟ ನಡೆದು, ಕೊಲೆಯಾಗಿರುವ ಘಟನೆಗಳ ಸಹ ಇವೆ.  ಈ ವಿಷಯವಾಗಿ ಹಲವಾರು ಬಾರಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರುವದಿಲ್ಲ. 
ಈಗ ಪ್ರಾರಂಭಗೊಂಡಿರುವ ಅಧಿವೇಶನದಲ್ಲಿ ಈ ವಿಷಯವನ್ನು ಗಣನೆಗೆ ತೆಗೆದುಕೊಂಡು ಮೊದಲಿನಂತೆ ಆಯಾ ತಾಲೂಕಿನ ತಹಶೀಲ್ದಾರರಿಗೆ ದಾರಿ ಇಲ್ಲದ ರೈತರಿಗೆ ದಾರಿ ಮಾಡಿಕೊಡುವ ಅಧಿಕಾರ ನೀಡಬೇಕು ಸತತ 
ಮೂರ್ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಸರಿಯಾಗಿ ಮಳೆಯಾದೇ ಭೀಕರ ಬರಗಾಲ ಆವರಿಸಿ ರೈತರು ಭಿತ್ತಿದ ಬೆಳೆ ಬಾರದೆ ಮತ್ತಷ್ಟು ಸಾಲದ ಸುಳಿಯಲ್ಲಿ ಸಿಲುಕಿದ ರೈತರು ನಿರಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
 
    ರೈತರ ಆತ್ಮಹತ್ಯೆ ತಡೆಗಟ್ಟಲು ರೈತರು ಕೃಷಿಗಾಗಿ ಮಾಡಿದ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸಾಲ ಮನ್ನಾ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ 
ಸರಕಾರ  ಕಚ್ಚಾಟ ಮಾಡದೇ ತಮಗೆ ಸಂಬಂಧಿಸಿದ ಬ್ಯಾಂಕುಗಳಲ್ಲಿ ಸಾಲ ಮನ್ನಾ ಮಾಡಿ ರೈತರ ಆತ್ಮಹತ್ಯೆಗಳು  ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಸಾಲ ಮನ್ನಾ ಮಾಡುವಂತಾಗಬೇಕೆಂದು ಆಗ್ರಹಿಸಿದರು.

    ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ರಾಜ್ಯಾದ್ಯಂತ ರೈತರ ಜಮೀನುಗಳನ್ನು ಸರ್ವೆ ಮಾಡದೇ ಇರುವ ಕಾರಣ ಜಮೀನುಗಳು ಹೆಚ್ಚು ಕಡಿಮೆ ಆಗಿ ಹೊಂದಾಣಿಕೆ ಆಗದೇ ರೈತರ ಮದ್ಯದಲ್ಲಿ 
ಜಗಳ ಅಗುತ್ತಿವೆ. ಬ್ರಿಟಿಷರ ಕಾಲದಲ್ಲಿ ಆದಂತಹ ಜಮೀನುಗಳ ಅಳತೆ ಸ್ವತಂತ್ರ ಸಿಕ್ಕು 68 ವರ್ಷಗಳಾದರೂ ಸಹ ರೈತರ ಜಮೀನುಗಳನ್ನು ಸರ್ವೆ ಮಾಡದೇ ಇರುವುದು ದುರಂತವೇ ಸರಿ. ನಿಯಮದ ಪ್ರಕಾರ ಪ್ರತಿ 30ವರ್ಷಕ್ಕೊಮ್ಮೆ
 ಇಡೀ ರಾಜ್ಯದ ರೈತರ ಜಮೀನು ಸರ್ವೆ ಮಾಡಿ  ಹೊಸ ಉತಾರೆ ಪೂರೈಸಬೇಕೆಂಬ ನಿಯಮವಿದ್ದರೂ ಸಹ ಸರಕಾರ ಸರ್ವೆ ಮಾಡಲು ಸರಕಾರ ನಿಷ್ಕಾಳಜಿ  ವಹಿಸುತ್ತಿದೆ. ರಾಜಕಾರಣಿಗಳು ತಮ್ಮ ಅಧಿಕಾರ ಹಾಗೂ 
ರಾಜಕೀಯ ಸ್ವಾರ್ಥಕ್ಕಾಗಿ ಜಾತಿ ಸರ್ವೆ ಮಾಡಿ ಜಾತಿ  ರಾಜಕಾರಣ ಮಾಡುತ್ತಾರೆ ಹೊರತು ರೈತರಿಗೆ ಸಮಸ್ಯೆಯಾಗುತ್ತಿರುವ ಜಮೀನುಗಳ ಸರ್ವೆ ಮಾಡಲು  ಆಗುತ್ತಿಲ್ಲ. ಆದರೆ ಪ್ರತಿಯೊಂದು ಜಿಲ್ಲೆಯಲ್ಲಿ ಸರ್ವೆಯರ 
ಕಮೀಟಿ ಮಾಡಿ ಜಿಲ್ಲೆಯಲ್ಲಿ ಕಮೀಟಿ ನೇಮಿಸಿ ಸರ್ವೆ ಮಾಡಿಸುವಂತೆ ಆದಷ್ಟು ಬೇಗ ಸರಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಖಂಡ ಕರ್ನಾಟಕ ರೈತ ಸಂಘ ಉಗ್ರ ಹೋರಾಟ ಮಾಡಬೇಕಾಗುತ್ತದೆ. 

    ಇಂದಿನಿಂದಲೇ ಅಹೋರಾತ್ರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು   ಪ್ರಾರಂಭಿಸಲಾಗಿದೆ ಎಂದು ಸರಕಾರಕ್ಕೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಪಾಂಡು ಹ್ಯಾಟಿ, ಗೌಡಪ್ಪ 
ಮೈಗೂರ, ವಿಜಯಪುರ ತಾಲುಕಾ ಗಿರೀಶ ಹಿರೇಮಠ, ರಮೇಶ ರಾಠೋಡ, ಭೀಮಶಿ ಚಲವಾದಿ, ಬಂದಗಿಸಾಬ ಮುಲ್ಲಾ, ಬಂದಗಿಸಾಬ ಮುಲ್ಲಾಳ, ರಮೇಶ ಹಡಪದ, ಕೆ.ಬಿ.ರೂಗಿ, ಶರಣಗೌಡ ಪಾಟೀಲ, ಅಲ್ಲಿಸಾಬ 
ಬೀಳಗಿ, ರುದ್ರಪ್ಪ ಯಂಭತ್ನಾಳ, ಶರಣಪ್ಪ ದರಿ, ಮಕ್ಬೂಲಸಾಬ ಬೀಳಗಿ, ಧರೆಪ್ಪ ಬಾಬಾನಗರ, ಕಲ್ಲಪ್ಪ ಮಾವಿನಗಿಡದ, ಊದಂಡಪ್ಪ ತಳವಾರ, ಸುರೇಶ ಗೋನಾಳ, ಸೋಮಪ್ಪ ಮಾವಿನಗಿಡದ, ಬಸವಂತಪ್ಪ 
ಬಾಬಾನಗರ, ಸಿದ್ದು ರೂಗಿ, ಸುಭಾಸ ಬಿಸಿರೊಟ್ಟಿ, ಧರೆಪ್ಪ ಕುಂಬಾರ, ಚಂದ್ರಾಮ ತೆಗ್ಗಿ, ಗುರು ಬಿರಾದಾರ, ಗುರು ಕೋಟ್ಯಾಳ, ಸಿದ್ರಾಮ ಜಂಗಮಶೆಟ್ಟಿ, ಸಣ್ಣಪ್ಪ ಸಜ್ಜನ, ಸಿದ್ದನಗೌಡ ಬಿರಾದಾರ, ದುಂಡಪ್ಪ ಕೊರಬು, 
ಬಾಪುಗೌಡ ಬಿರಾದಾರ, ಕೃಷ್ನಪ್ಪ ಬೊಮ್ಮನರಡ್ಡಿ, ಬಸನಗೌಡ ಬಿರಾದಾರ, ಸಿದ್ದು ನಾಗರಾಳ, ಸಂಗಪ್ಪ ಹಂಗನಳ್ಳಿ, ಮಹಿಳೆಯರಾದ ಶಾಂತಾ ಬಿರಾದಾರ, ದುಂಡವ್ವ ದಂಧರಗಿ, ಕಲಾವತಿ ಬಿಜ್ಜರಗಿ, ಶಾಂತಾ ಜಂಗಮಶೆಟ್ಟಿ, 
ಬೋರಕ್ಕ ಹಿರೇಕುರುಬರ, ಗಂಗವ್ವ ಹಿರೇಕುರುಬರ, ದುಂಡವ್ವ ಹಿರೇಕುರುಬರ ಇನ್ನಿತರ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.