ದಿ. 14 ರಂದು ಬೆಳಗಾವಿಯಲ್ಲಿ ಜೆ.ಡಿ.ಎಸ್. ಕಾರ್ಯಕರ್ತರ ಬೃಹತ್ ಸಮಾವೇಶ

ದಿ. 14 ರಂದು ಬೆಳಗಾವಿಯಲ್ಲಿ ಜೆ.ಡಿ.ಎಸ್. ಕಾರ್ಯಕರ್ತರ ಬೃಹತ್ ಸಮಾವೇಶ

ಬಾಗಲಕೋಟ,ನ.13: ಬೆಳಗಾವಿಯ ಸಿ.ಪಿ.ಎಡ್ ಕಾಲೇಜು ಮೈದಾನ ಕಿತ್ತೂರ ಚೆನ್ನಮ್ಮ ಸರ್ಕಲ್ ಹತ್ತಿರ ನಾಳೆ ನ. 14 ಮಂಗಳವಾರ 11 ಗಂಟೆಗೆ ಜೆ.ಡಿ.ಎಸ್. ಕಾರ್ಯಕರ್ತರ ಬೃಹತ್ ಸಮಾವೇಶ ಮಾಜಿ ಮುಖ್ಯಮಂತ್ರಿ, ರೈತನಾಯಕ ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಹೂವಿನ ಹಿಪ್ಪರಗಿ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ ಪಕ್ಷಕ್ಕೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಸೇರ್ಪಡೆಗೊಳ್ಳಲಿದ್ದಾರೆ. ಈ ಸಭೆಂiÀiಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ, ನವಲಗುಂದ ಶಾಸಕರಾದ ರೈತ ಮುಖಂಡ ಎನ್.ಎಚ್. ಕೋನರಡ್ಡಿ ಹಾಗೂ ಮಾಜಿ ಶಾಸಕರು, ಮಾಜಿ ಸಚಿವರು ಹಾಲಿ ಶಾಸಕರು ಉಪಸ್ಥಿತರಿರುವರು. ಈ ಬೃಹತ್ ಸಮಾವೇಶಕ್ಕೆ ಬಾಗಲಕೋಟ ಜಿಲ್ಲೆಯಿಂದ ಸುಮಾರು ಹತ್ತು ಸಾವಿರ ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಆದ್ದರಿಂದ ದಿನಾಂಕ: 14 ರಂದು ಬೆಳಿಗ್ಗೆ 11-00ಕ್ಕೆ ಬಾಗಲಕೋಟ ಜಿಲ್ಲೆಯ ಎಲ್ಲ ಕಾರ್ಯಕರ್ತರು, ಅಭಿಮಾನಿಗಳು, ವಿವಿಧ ಘಟಕದ ಅಧ್ಯಕ್ಷರು, ಎಲ್ಲ ತಾಲೂಕಾ, ಜಿಲ್ಲಾ ಪದಾಧಿಕಾರಿಗಳು, ಮಹಿಳಾ ಘಟಕ, ಯುವ ಘಟಕ, ಅಲ್ಪಸಂಖ್ಯಾತರ ಘಟಕ, ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿರಬೇಕೆಂದು ಜಿಲ್ಲಾ ಅಧ್ಯಕ್ಷರಾದ ರವಿ ಹುಣಶ್ಯಾಳ ಹಾಗೂ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ ಜಂಟಿಯಾಗಿ ತಿಳಿಸಿದ್ದಾರೆ.