ಪಹಣಿ ಉತಾರಿ ನೀಡಬೇಕೆಂದು ಭಾರತೀಯ ಭಾವೈಕ್ಯತೆ ಸಮಿತಿ ಮನವಿ

ಪಹಣಿ ಉತಾರಿ ನೀಡಬೇಕೆಂದು ಭಾರತೀಯ ಭಾವೈಕ್ಯತೆ ಸಮಿತಿ ಮನವಿ

ವಿಜಯಪುರ ಜೂ.15: ಬಬಲೇಶ್ವರ ಗ್ರಾಮದಲ್ಲಿ 25 ಎಕರೆಯ ಜಾಗದಲ್ಲಿ 500 ಮನೆ ಕಟ್ಟಡ ಹೊಂದಿವೆ. ಸರ್ವೆ ನಂಬರ 1 ರಲ್ಲಿ ಸುಮಾರು 30-40 ವರ್ಷದಿಂದ ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದಾರೆ. ಆದರೆ ಇವರಿಗೆ ಅವರಿರುವ ಜಾಗದ ಪಹಣಿ ಉತಾರಿ ಇನ್ನು ನೀಡಿಲ್ಲ ಇವರಿಗೆ ಪಹಣಿ ಉತಾರಿ ನೀಡಬೇಕೆಂದು ಭಾರತೀಯ ಭಾವೈಕ್ಯತೆ ಸಮಿತಿ ವಿಜಯಪುರ ವತಿಯಿಂದ ಡಾ.ರವಿ (ರಾಜೇಶ) ವೈ. ವಲ್ಲ್ಯಾಪೂರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಚ್. ಬೂದೆಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. 
ಈ ಸಂದರ್ಭದಲ್ಲಿ ಡಾ.ರವೈ(ರಾಜೇಶ) ವೈ. ವಲ್ಲ್ಯಾಪೂರ ಮಾತನಾಡಿ, ತಹಶೀಲ್ದಾರ, ಗ್ರಾ.ಪಂಚಾಯಿತಿಯ, ಜನಪ್ರತಿನಿಧಿಯ ನಿರ್ಲಕ್ಷ್ಯದಿಂದ ಉತಾರಿಗಳು ಇನ್ನುವರೆಗೆ ಇವರಿಗೆ ಸಿಕ್ಕಿರುವುದಿಲ್ಲ. ಚುನಾವಣೆ ಬಂದಾಗ ವೋಟ್ ಪಡೆಯೋಕೆ ಮಾತ್ರ ಜನರು ಬೇಕು ಆದರೆ ಇವರಿಗೆ ಉತಾರೆ ನೀಡುವುದರಲ್ಲಿ ವಿಫಲರಾಗಿದ್ದಾರೆ. ತಕ್ಷಣ ಇವರಿರುವ ಜಾಗಕ್ಕೆ ಬಂದು ಅವರಿಗೆ ಸೇರಬೇಕಾದ ಜಾಗದ ಪಹಣಿ ಪತ್ರ ನೀಡಿ ಅವರಿಗೆ ಜೀವನ ಸಾಗಿಸೋಕೆ ಅನುವು ಮಾಡಿಕೊಡಬೇಕೆಂದು ತಿಳಿಸಿದರು. 
ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಒಬ್ಬರಮೇಲೊಬ್ಬರು ಗೂಬೆ ಕೂಡಿಸುವುದನ್ನು ಬಿಡಬೇಕು. ರೈತರ ಸಾಲ ಮನ್ನಾ ಮಾಡುವಲ್ಲಿ ವಿಫಲರಾಗಿದ್ದಾರೆ. ದಯಮಾಡಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಮುಂಬರುವ ಚುನಾವಣೆಯಲ್ಲಿ ರೈತರು ಹಾಗೂ ಜನಪ್ರತಿನಿಧಿಗಳು ತಕ್ಕ ಪಾಠ ಕಲಿಸುತ್ತಾರೆ. ಇದನ್ನು ಎಚ್ಚೆತ್ತುಗೊಂಡು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಬೇಕು. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರಪರ ಕಾಳಜಿ ವಹಿಸಿ ಅವರ ಮೇಲಿರುವ ಸಾಲ ಮನ್ನಾ ಮಾಡಬೇಕೆಂದು ನಮ್ಮ ಸಮಿತಿ ಒತ್ತಾಯಿಸುತ್ತದೆ. 
    ಮತ್ತೆ ಜಿಲ್ಲಾಧಿಕಾರಿಗಳಿಗೆ ಸದರಿ ವಿಷಯದ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿಲಾಗಿದೆ. ಅಕ್ಷರ ದಾಸೋಹ, ಅಡುಗೆ ಕೆಲಸ ಮಾಡುವವರನ್ನು ನೌಕರಿಯಿಂದ ತೆಗೆದು ಹಾಕಿದ್ದು, 5 ಜನರಿಗೆ ಮತ್ತೆ ಕೆಲಸಕ್ಕೆ ತೆಗೆದುಕೊಂಡು, ಅಕ್ಕಿ, ಗೋದಿ, ಹಾಲಿನ ಪುಡಿ ಹಾಗು ತೊಗರಿ ಬೆಳೆ, ಎಣ್ಣೆ, ಪಾಕೇಟ ಕಾಳುಸಂತೆಯಲ್ಲಿ ನಗರದಲ್ಲಿ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಆದರೆ ನಗರ ಶಾಸಕರಾದ ಡಾ.ಎಸ್.ಮಕ್ಬೂಲ್ ಬಾಗವಾನ ಇದಕ್ಕೆ ಯಾವುದೇ ಉತ್ತರ ನೀಡಿಲ್ಲ. ಈ ಕುರಿತು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅಲ್ಲಿ ನಡೆಯುವ ಅಕ್ರಮ ದಂಧೆಯಲ್ಲಿ ಶಾಸಕರ ಕೈವಾಡವಿದೆಯೇ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
    ವಿಜಯಪುರ ಜಿಲ್ಲೆಯ ಜಲನಗರ ಠಾಣೆಯ ಬಗ್ಗೆ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಮಹಿಳೆ ಪೇದೆಯಿಂದ ಮಧ್ಯದ ಬಾಟಲುಗಳನ್ನು ತರೆಸಿ ಮಧ್ಯವನ್ನು ಕುಡಿಯುತ್ತಿರುವುದು ಪ್ರಸಾರಗೊಳ್ಳುತ್ತಿದ್ದು, ಕಾನೂನು ರಕ್ಷಣೆ ಮಾಡುವವರೆ ಈ ರೀತಿ ಮಾಡಿದರೆ ಸಾರ್ವಜನಿಕರ ಗತಿ ಏನಾಗುತ್ತಿದೆ ಇಂತಹವರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆದರಿಂದ ಇವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. 
    ಈ ಸಂದರ್ಭದಲ್ಲಿ ತಂಗೆವ್ವಾ ಮುತ್ತಪ್ಪ ವಡರ, ಹನಮವ್ವ ಹಿರೇಕುರಬರ, ಮಾದೇವಿ ಕಲ್ಯಾಣಿ, ಸಿದ್ದವ್ವ ಹಿರೇಕುರಬರ, ಯಮನವ್ವ ತಳವಾರ, ಲಲಿತಾ ಜಾಮನಗೋಳ, ಬಿಸ್ಮಿಲ್ಲಾ ಗೋಟೆ, ಬಂದೇನಮಾಜ ಹಾಜೀಸಾಬ, ಸಿದ್ದಪ್ಪ ಜಾಬನವರ, ಸಂಗಪ್ಪ ಕಲ್ಯಾಣಿ, ಬಾಷಾಸಾಬ ಕಕ್ಕೇರಿ, ಗುರುಪಾದಪ್ಪ ಕಾರಜೋಳ ಮುಂತಾದವರು ಇದ್ದರು.