ಜವಳಿ ಸಚಿವರ ರುದ್ರಪ್ಪ ಮಾನಪ್ಪ ಲಮಾಣಿ ಜಿಲ್ಲಾ ಪ್ರವಾಸ

ಜವಳಿ ಸಚಿವರ ರುದ್ರಪ್ಪ ಮಾನಪ್ಪ ಲಮಾಣಿ ಜಿಲ್ಲಾ ಪ್ರವಾಸ

ಬಾಗಲಕೋಟೆ, ಡಿ.5 : ಜವಳಿ ಹಾಗೂ ಮುಜರಾಯಿ ಸಚಿವರಾದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಡಿಸೆಂಬರ 6 ರಂದು ಬೆಳಿಗ್ಗೆ 11 ಗಂಟೆಗೆ ಹಾವೇರಿಯಿಂದ ಹುನಗುಂದ ತಾಲೂಕಿನ ಇಲಕಲ್ಲಗೆ ಆಗಮಿಸಿ, ಜವಳಿ ಇಲಾಖೆಯಿಂದ ಹಮ್ಮಿಕೊಂಡ ನೇಕಾರರ ವಸತಿ ಮೇಲಿನ ಸಾಲ ಮತ್ತು ಬಡ್ಡಿ ಮನ್ನಾ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮದ್ಯಾಹ್ನ 3 ಗಂಟೆಗೆ ಸೂಳೇಭಾವಿ ಗ್ರಾಮದಲ್ಲಿರುವ ಶ್ರೀ ಶಾಖಾಂಬರಿ ನೇಕಾರರ ಸಹಕಾರ ಸಂಘಕ್ಕೆ ಭೇಟಿ ಹಾಗೂ ವಿವಿಧ ನೇಕಾರರ ಸಂಘ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮತ್ತು ನೇಕಾರರೊಂದಿಗೆ ಚರ್ಚೆ ಮಾಡಲಿದ್ದಾರೆ. ಸಂಜೆ 6ಕ್ಕೆ ಇಲಕಲ್ಲಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.