ಸುರೇಶ ಗೊಣಸಗಿಗೆ ಸನ್ಮಾನ

ಸುರೇಶ ಗೊಣಸಗಿಗೆ ಸನ್ಮಾನ

ವಿಜಯಪುರ,ಡಿ.31: ವಿಜಯಪುರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರರಾದ ಶ್ರೀ ಸುರೇಶ ಗೊಣಸಗಿಯವರು ಕೃಷಿ ವಿಶ್ವವಿದ್ಯಾಲಯ ಧಾರವಾಡ ಇದರ ನೂತನ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ವಿಜಯಪುರ ಜಿಲ್ಲಾ ಚಲವಾದಿ ಸಮಾಜ ಬಾಂದವರು ನಗರದ ಬುದ್ಧ ವ್ಯವಹಾರದಲ್ಲಿ ಸನ್ಮಾನಿಸಿದರು. 
ಸನ್ಮಾನ ಕಾರ್ಯಕ್ರಮದಲ್ಲಿ ಇನ್ನೋರ್ವ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸದಸ್ಯ ಪೀರಪ್ಪ ನಡುವಿನಮನಿಯವರನ್ನು ಕೂಡ ಚಲವಾದಿ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಚಂದ್ರಶೇಖ ಕೊಡಬಾಗಿ, ಸುಭಾಸ ಗುಡದಿನ್ನಿ, ಅಡವೆಪ್ಪ ಸಾಲಗಲ್, ಸುನೀಲ ಉಕ್ಕಲಿ, ಮಾತನಾಡಿದರು. 
ಈ ಸಭೆಯಲ್ಲಿ ಉಪಸ್ಥಿತರಾದ ಬಿ.ಎಸ್. ಬ್ಯಾಳಿ, ಸಾಬು ಚಲವಾದಿ, ಸಂಗಪ್ಪ ಚಲವಾದಿ, ಬಿ.ಆರ್. ತಳಕೇರಿ, ಗುನ್ನಾಪುರ, ಎಮ್.ಬಿ. ಹಳ್ಳದಮನಿ, ನಿಂಗಳಗಿ, ಕೆ.ಎಮ್. ಶಿವಶರಣ, ಸಂತೋಷ ಶಹಾಪುರ ಮುಂತಾದವರು ಉಪಸ್ಥಿತರಿದ್ದರು.