ಶ್ರೀಹರ್ಷಾಶೆಟ್ಟಿ ಉತ್ತರಕುಮಾರನಲ್ಲ ಮಹಾಭಾರತದ ಅರ್ಜುನನೆಂದು ಸಾಬೀತುಪಡಿಸಬೇಕು:

ಶ್ರೀಹರ್ಷಾಶೆಟ್ಟಿ ಉತ್ತರಕುಮಾರನಲ್ಲ ಮಹಾಭಾರತದ ಅರ್ಜುನನೆಂದು ಸಾಬೀತುಪಡಿಸಬೇಕು:

ವಿಜಯಪುರ,ಆ.31: ವಿಜಯಪುರ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ರಕ್ಷಣೆ ಮಾಡಬೇಕಾದ ಹೊಣೆ ಹೊತ್ತ ಜಿಲ್ಲಾಡಳಿತ ಅಕ್ರಮ ಕಟ್ಟಡಗಳಿಗೆ ಪರವಾನಿಗೆ ನೀಡುವ ಮೂಲಕ ಐತಿಹಾಸಿಕ ಸ್ಮಾರಕಗಳ ನಿಷೇಧಿತ ವಲಯವನ್ನು ಖಾಸಗಿ ಪರಭಾರಗೆ ನೀಡುತ್ತಿರುವುದು ಖಂಡನೀಯವಾದದ್ದು ಖಾಸಗಿ ವ್ಯಕ್ತಿಗಳು ಮತ್ತು ಜಿಲ್ಲಾಡಳಿತ ಪ್ರಾಚೀನ ಸ್ಮಾರಕಗಳನ್ನು ಧ್ವಂಸಮಾಡುವ ಮೂಲಕ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಆನಂದ ಔÀದಿ ಆರೋಪಿಸಿದರು. 

ವಿಜಯಪುರ ನಗರದ ವಾರ್ಡ್ 16 ರಲ್ಲಿ ಬಡವರು, ದೀನ ದಲಿತರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಜನಗಳು ಸರ್ಕಾರಿ ಜಾಗೆ ತಮ್ಮ ವಾಸಕ್ಕಾಗಿ ಕಟ್ಟಿಕೊಂಡಿರುವ ಮನೆಗಳನ್ನು ಮತ್ತು ದುರ್ಬಲ ಜನರ ಸಂಸ್ಥೆಗಳಡಿಯಲ್ಲಿ ಬರುವ ಸಣ್ಣ ಪುಟ್ಟ ಶಿಕ್ಷಣ ಸಂಸ್ಥೆಗಳ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ತೋರಿಸಿದ ತಮ್ಮ ಉತ್ತರ ಕುಮಾರನ ಪೌರುಷವನ್ನು ಈ ಪ್ರಕರಣದಲ್ಲಿ ತೋರಿಸುವ ಮೂಲಕ ಶ್ರೀಹರ್ಷಾಶೆಟ್ಟಿ ಅವರು ಉತ್ತರಕುಮಾರನಲ್ಲ ಮಹಾಭಾರತದ ಶ್ರೀ ಕೃಷ್ಣನ ಭಕ್ತ ಅರ್ಜುನನೆಂದು ಸಾಬೀತು ಪಡಿಸಬೇಕೆಂದು ಸವಾಲು ಹಾಕಿದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಈ ಹಿಂದೆ ಮನವಿ ಸಲ್ಲಿಸಿದಾಗ ಕೇಂದ್ರದ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳರವರು ಪಾಲಿಕೆಯ ಆಯುಕ್ತರು ದಕ್ಷ ಮತ್ತು ಪ್ರಾಮಾಣಿಕರಾಗಿದ್ದಾರೆ ಕೆಲ ಕಿಡಿಗೇಡಿಗಳು ಆಯುಕ್ತರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುವ ಮೂಲಕ ವಿನಾಕಾರಣ ಆಯುಕ್ತರ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಹೇಳಿದ್ದರು. ನಾವು ಕಾನೂನಿನ ಪ್ರಕಾರ ದಾಖಲೆಗಳ ಸಮೇತ ಪ್ರತಿಭಟನೆ ಮಾಡಿದ್ದೇವೆ. ಬಸನಗೌಡ ಪಾಟೀಲ (ಯತ್ನಾಳ)ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಯಿಲ್ಲದೆ ಕೂಲಿ ಕೊಟ್ಟು ಸುಮಾರು 500 ಜನ ಮುಗ್ಧರದ್ದು ಸೇರಿಸುವ ಮೂಲಕ ಹೋರಾಟ ಮಾಡಿದ್ದು ಅಧಿಕಾರಿಯನ್ನು ರಕ್ಷಣೆಮಾಡಿಲಿಕ್ಕೆ ಹೊರತು ಇಲ್ಲಿನ ಜನ ಸಮೂಹ ಮತ್ತು ಸ್ಮಾರಕಗಳ ರಕ್ಷಣೆ ವಿಷಯದಲ್ಲಿ ತಮ್ಮ ಕರ್ತವ್ಯ ಮರೆಸಿರುವುದು ಖಂಡನೀಯ ಎಂದರು.

ಅವರು ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಖುದ್ದಾಗಿ ಕರ್ನಾಟಕ ಸ್ಮಾರಕ ರಕ್ಷಣಾ ಸಮಿತಿ ಹಾಗೂ ಸಮತಾ ಸೈನಿಕ ದಳದ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗೆ ಭೇಟಿಯಾಗಿ ವಿಜಯಪುರ ನಗರದ ವಾರ್ಡ್ ನಂ.9ರಲ್ಲಿ ಬರುವ ರಿ.ಸ.ನಂ. 20/2ಡ ಆಸ್ತಿಯ ಒಳಗಡೆ ನಗರದ ಲಿಂಗದÀ ಗುಡಿ ರಸ್ತೆಯಲ್ಲಿ ಆದಿಲ್ ಶಾಹಿ ಕಾಲದ ನಗರ ಕೋಟೆಗೆ ಹೊಂದಿಕೊಂಡಂತೆ ವ್ಹಿ.ಜಿ.ಫಾರೇಖ ಎಂಬ ವ್ಯಕ್ತಿ ಮಹಾನಗರ ಪಾಲಿಕೆಯ ಪೌರಾಯುಕ್ತ ಶ್ರೀಹರ್ಷಾಶೆಟ್ಟಿಯೊಂದಿಗೆ ಶ್ಯಾಮೀಲಾಗಿ ಕಟ್ಟಡ ನಿರ್ಮಿಸುತ್ತಿರುವುದರ ಬಗ್ಗೆ ಚರ್ಚಿಸಿ ಈ ಹಿಂದೆ ನಮ್ಮ ಸಂಘಟನೆಗಳ ಮೂಲಕ ಹಲವಾರು ಭಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಜಿಲ್ಲಾಡಳಿತದಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ನಮ್ಮ ಅನುಮಾನಕ್ಕೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸ್ಮಾರಕ ರಕ್ಷಣಾ ಸಮಿತಿಯ ಗೌರವ ಅಧ್ಯಕ್ಷ ಸಿದ್ದು ಕಾಮತ ಅವರು ಮಾತನಾಡಿ, ಐತಿಹಾಸಿಕ ನಗರದ ಸ್ಮಾರಕಗಳ ನಿಷೇಧಿತ ವಲಯದಲ್ಲಿ ಈಗಾಗಲೇ ಹಲವಾರು ಕಟ್ಟಡಗಳು ತಲೆ ಎತ್ತಿವೆ. ಇದಕ್ಕೆ ಹಿಂದಿನ ವಿಜಯಪುರ ಜಿಲ್ಲೆಯ ಅಧಿಕಾರಿಗಳೇ ಕಾರಣ. ಈಗಿರುವ ಜಿಲ್ಲಾಧಿಕಾರಿಗಳಾದ ತಾವು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಾಗಿದ್ದು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಕಟ್ಟಡವನ್ನು ತೆರವುಗೊಳಿಸಬೇಕು. ಜೊತೆಗೆ ಜಿಲ್ಲೆಯ ಜನತೆಗೆ ತಾವು ದಕ್ಷ ಮತ್ತು ಪ್ರಾಮಾಣಿಕರೆಂದು ಈ ಪ್ರಕರಣದಲ್ಲಿ ಸಾಬೀತುಪಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ವಿನಂತಿಸಿಕೊಂಡರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸ್ಮಾರಕ ರಕ್ಷಣಾ ಸಮಿತಿಯ ಅಧ್ಯಕ್ಷ ಅನ್ವರ ಹುಸೇನ ಮಕಾಂದಾರ ಮಾತನಾಡಿ, ಈಗಾಗಲೇ ನಮ್ಮ ಸಮೀತಿಯ ಮೂಲಕ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಿಕೊಂಡಾಗ ಅವರು ನಮ್ಮ ಪಾಲಿನ ಕರ್ತವ್ಯವನ್ನು ನಾವು ಮಾಡಿದ್ದೇವೆ. ನೋಟಿಸ್ ನೀಡುವ ಮೂಲಕ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಆ ಕಟ್ಟಡ ತೆರವು ಗೊಳಿಸುವ ಅಧಿಕಾರ ವಿರುವುದು ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮಾತ್ರ ಎಂಬುವುದು ಎಲ್ಲರಿಗೂ ತಿಳಿದ ವಿಷಯ ಈಗಾಗಲೇ ಮಹಾನಗರ ಆಯುಕ್ತರು ಕಟ್ಟಡ ಪರವಾನಿಗೆಯನ್ನು ರದ್ದುಗೊಳಿಸಿದ್ದು ಶ್ಲಾಘನೀಯ. ಈ ಪ್ರಕರಣದಲ್ಲಿ ತಮ್ಮ ಪ್ರಾಮಾಣಿಕತೆ ಮೆರೆಯಲಿ ಎಂದರು.

ಈ ಸಂದರ್ಭದಲ್ಲಿ ಸುರೇಶ ಚವ್ಹಾಣ, ಮೊಹಮ್ಮದಗೌಸ ಟಕ್ಕಳಕಿ, ಶರಣಗೌಡ ಬಿರಾದಾರ, ಶ್ರೀಧರ ಇಮ್ಮನದ, ಚಂದ್ರಕಾಂತ ತಾರನಾಳ, ವಿನೋದ ಕೋಟ್ಯಾಳ, ತೌಫಿಕ ಕÀವರೆ, ಅಬೂಬಕರ ಮುಲ್ಲಾ, ಸುಭಾಶ ನಾಯಿಕ, ರಾಜು ನಾಯಕ, ರಿಯಾಜ ದಳವಾಯಿ, ಯಾಸೀನ ಬಳ್ಳಾರಿ, ಅಲ್ತಾಫ ಆಲಮೇಲ, ವಸಂತ ಕೊಂಡಗೂಳಿ, ಅಮಜದ ಮುತುವಲ್ಲಿ, ಅಬೂಕಲಾಂ ಕರಜಗಿ, ಹೈಯ್ಯುಂ ಭಕ್ಷಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.