ನಗರದಲ್ಲಿ ಇಂದಿನಿಂದ ಶ್ರೀ ದತ್ತ ಜಯಂತಿ ಉತ್ಸವ

ನಗರದಲ್ಲಿ ಇಂದಿನಿಂದ ಶ್ರೀ ದತ್ತ ಜಯಂತಿ ಉತ್ಸವ

    ಬಾಗಲಕೋಟೆ, ಡಿ. 2 ಃ ನವನಗರದ ಸೆಕ್ಟರ್ ನಂ. 29 ರಲ್ಲಿರುವ ವೆಂಕಟಪೇಟೆಯ ಶ್ರೀ ದತ್ತಾತೆÂ್ರೀಯ ದೇವಸ್ಥಾನದಲ್ಲಿ ದಿ. 3 ರಂದು ರವಿವಾರ ಶ್ರೀ ದತ್ತ ಜಯಂತಿ ಉತ್ಸವದ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
    ರವಿವಾರ ಮುಂಜಾನೆ ರುದ್ರಾಭಿಷೇಕ, ಹೋಮ, ಗುರುಚರಿತಾಮೃತ, ಮಂತ್ರ ಪಠಣ, ಮಹಾಪೂಜೆ, ಸಾಯಂಕಾಲ 6 ಗಂಟೆಗೆ ಶ್ರೀ ದತ್ತಾತೆÂ್ರೀಯರ ತೊಟ್ಟಿಲು ಕಾರ್ಯಕ್ರಮ, ಭಜನೆ, ಸಂಕೀರ್ತನೆ, ತಾಂಬೂಲ ವಿತರಣೆ. ನಂತರ ಶ್ರೀ ಅಯ್ಯಪ್ಪಸ್ವಾಮಿ ಸದ್ಭಕ್ತ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗುವುದು.
    ದಿ. 4 ರಂದು ಸೋಮವಾರದಂದು ಮುಂಜಾನೆ ಅಭಿಷೇಕ, ಗುರುಚರಿತ್ರೆ, ನಂತರóï 10.30 ಗಂಟೆಗೆ ನವನಗರದ ಶ್ರೀ ವಿಠ್ಠಲ ಸದ್ಭಕ್ತ ಸಂತ ಮಂಡಳಿಯಿಂದ ಭಜನೆ ಸಂಕೀರ್ತನೆ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ, ಸಂಜೆ 6 ಗಂಟೆಗೆ ಕೇಶವ ರಘುವಿಈರ ಹಾಗೂ ತಂಡದವರಿಂದ ಭಕ್ತಿ ಸಂಗೀತದ ಕಾರ್ಯಕ್ರಮ ಜರುಗಲಿದ್ದು ಭಕ್ತಾದಿಗಳು ಪಾಲ್ಗೊಳ್ಳಲು ದೇವಸ್ಥಾನದ ಟ್ರಸ್ಟ ಪ್ರಕಟಣೆ ತಿಳಿಸಿದೆ.