ಸೋಲುವ ಭೀತಿಯಲ್ಲಿ ರಾಜ್ಯ ಕಮಲ ಪಾಳಯ

ಸೋಲುವ ಭೀತಿಯಲ್ಲಿ ರಾಜ್ಯ ಕಮಲ ಪಾಳಯ

ರಾಜ್ಯದಲ್ಲಿ ಕೈ ಪಾಳಯದವರ ಮೇಲೆ ನಡೆಯುತ್ತಿರುವ ಐ ಟಿ ದಾಳಿ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರವರು ಸೋಲುವ ಭೀತಿಯಿಂದ ಪದೇ ಪದೇ ಕಾಂಗ್ರೆಸ್ಸಿಗರ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದಾರೆ ಎಂದು ಸಿ ಎಂ ಸಿದ್ದರಾಮಯ್ಯ ರವರು ಕೆಂಡಾಮಂಡಲ ರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೆಲ್ಲುವುದಿಲ್ಲ ಎಂಬುದು ಬಿಜೆಪಿಯವರಿಗೆ ಖಚಿತವಾಗುತ್ತಿದೆ. ಹಾಗಾಗಿ ಹೇಗಾದರೂ ಗೆಲ್ಲಲೇಬೇಕೆಂದು ನಿರ್ಧರಿಸಿ ವಾಮಮಾರ್ಗದಿಂದ ಗೆಲುವು ಸಾಧಿಸಲು ಹೋಗುತ್ತಿದ್ದಾರೆ. ಇದು ಸೌಜನ್ಯವಲ್ಲ, ನಾನಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ ಮಾಡಲಾಗಿದೆ. ನರೇಂದ್ರ ಮೋದಿ, ಅಮಿತ್ ಷಾ ಅವರು ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.