ಸಮಾಜ ಸೇವಕ ಬಸವರಾಜ ಲಾಳಸಂಗಿ ನಿಧನ

ಸಮಾಜ ಸೇವಕ ಬಸವರಾಜ ಲಾಳಸಂಗಿ ನಿಧನ

ವಿಜಯಪುರ, ಜೂ.19: ನಗರದಗಣ್ಯ ವರ್ತಕ, ಸಮಾಜ ಸೇವಕ ಬಸವರಾಜರುದ್ರಪ್ಪ ಲಾಳಸಂಗಿ(63) ಅವರು ಶನಿವಾರ ಮಧ್ಯಾಹ್ನ 1.45ಕ್ಕೆ ನಿಧನರಾದರು.
ಅವರಿಗೆ ಪತ್ನಿ.ಓರ್ವ ಪುತ್ರಿ, ಇಬ್ಬರು ಪುತ್ರರು ಸೇರಿದಂತೆಅಪಾರ ಬಂಧು-ಬಾಂಧವರಿದ್ದಾರೆ.

ಮೃತರಅಂತ್ಯಕ್ರಿಯೆಯುರವಿವಾರ ಬೆಳಿಗ್ಗೆ 10ಕ್ಕೆ ಸೋಲಾಪುರರಸ್ತೆಯಲ್ಲಿರುವತಮ್ಮ ಸ್ವಂತತೋಟ(ಕನ್ನಾಳ ಸಮೀಪ)ದಲ್ಲಿ ನಡೆಯಲಿದೆಎಂದುಅವರಕುಟುಂಬದ ಸದಸ್ಯರು ತಿಳಿಸಿದ್ದಾರೆ.

ವಿಜಯಪುರಜಿಲ್ಲಾ ಬಣಜಿಗ ಸಮಾಜಕ್ಷೇಮಾಭಿವೃದ್ಧಿ ಸಂಘದಅದ್ಯಕ್ಷ, ವಿಜಯಪುರ ಸ್ಟೇಷನರಿ ವ್ಯಾಪಾರಸ್ಥರ ಸಂಘÀ ಹಾಗೂ ಈಶ್ವರಕೋ-ಆಪರೇಟಿವ್ ಸೊಸಾಯಿಟಿಯಉಪಾಧ್ಯಕ್ಷರಾಗಿದ್ದ ಲಾಳಸಂಗಿ ಅವರು, ಬಿಜೆಪಿಯಲ್ಲಿಯೂತಮ್ಮನ್ನು ಗುರುತಿಸಿಕೊಂಡಿದ್ದರು.
ವ್ಯಾಪಾರ ವೃತ್ತಿಯೊಂದಿಗೆ ಕಳೆದ ಮೂವತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದ ದಿವಂಗತ ಬಸವರಾಜ ಲಾಳಸಂಗಿ ಅವರು, ಬಡವರ ಬಗ್ಗೆ ಅಪಾರ ಕಳಕಳಿಯುಳ್ಳವರಾಗಿದ್ದರು.ಕೊಡುಗೈದಾನಿಯಾಗಿಜೀವನದುದ್ದಕ್ಕೂ ಬಡÀವರು, ಅನಾಥರಿಗೆ ನೆರವಾಗುತ್ತ್ತ ಬಂದಿದ್ದರು.

ಶಿಕ್ಷಣ ಪ್ರೇಮಿಯೂಆಗಿದ್ದ ಲಾಳಸಂಗಿ ಅವರು, ಪ್ರತಿ ವರ್ಷ ನೂರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್, ನೋಟಬುಕ್, ಪೆನ್ನು, ಸಮವಸ್ತ್ರ ವಿತರಿಸುತ್ತ ಬಂದಿರುವುದುಅವರ ಸಾಮಾಜಿಕ ಕಳಕಳಿಗೆ ಸಾಕ್ಷಿ.
ಗಣ್ಯರ ಸಂತಾಪ :

ಸಮಾಜ ಸೇವಕ ಬಸವರಾಜ ಲಾಳಸಂಗಿ ಅವರ ನಿಧನಕ್ಕೆಜಿಲ್ಲಾಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಕೇಂದ್ರ ಸಚಿವರಮೇಶಜಿಗಜಿಣಗಿ, ಮಾಜಿ ಸಚಿವರಾದಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ಶಾಸಕರಾದರಮೇಶ ಭೂಸನೂರ, ಶಿವಾನಂದ ಪಾಟೀಲ, ಯಶವಂತ್ರಾಯಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಪಾಟೀಲ(ಯತ್ನಾಳ), ಅರುಣ ಶಹಾಪೂರ, ಮಾಜಿ ಶಾಸಕ ವಿಠ್ಠಲ ಕಟಕಧೋಂಡ, ಮುಖಂಡರಾದಚಂದ್ರಶೇಖರಕವಟಗಿ, ವಿಜುಗೌಡ ಪಾಟೀಲ, ಪಾಲಿಕೆ ಸದಸ್ಯರಾದ ಉಮೇಶ ವಂದಾಲ, ಪ್ರೇಮಾನಂದ ಬಿರಾದಾರ, ಆನಂದ ಧುಮಾಳೆ, ಬಣಜಿಗ ಸಮಾಜದಧುರೀಣರಾದಡಿ.ಎಸ್.ಗುಡ್ಡೋಡಗಿ, ಸಿದ್ದಣ್ಣ ಸಕ್ರಿ, ರವೀಂದ್ರ ಬಿಜ್ಜರಗಿ, ಮಲ್ಲಿಕಾರ್ಜುನಯಂಡಿಗೇರಿ ಮುಂತಾದಗಣ್ಯರು ಸಂತಾಪ ಸೂಚಿಸಿದ್ದಾರೆ.