ಸರ್ ಎಂ. ವಿಶ್ವೇಶ್ವರಯ್ಯ  ಇಂಜನಿಯರಿಂಗ್ ಪ್ರತಿಷ್ಠಾನ ಪ್ರಶಸ್ತಿ

ಸರ್ ಎಂ. ವಿಶ್ವೇಶ್ವರಯ್ಯ  ಇಂಜನಿಯರಿಂಗ್ ಪ್ರತಿಷ್ಠಾನ ಪ್ರಶಸ್ತಿ

ಬೆಳಗಾವಿ,ಅ.16: ಸರ್ ಎಂ. ವಿಶ್ವೇಶ್ವರಯ್ಯ  ಇಂಜನಿಯರಿಂಗ್ ಪ್ರತಿಷ್ಠಾನದ ವತಿಯಿಂದ  ಶ್ರಿಮತಿ ಪಾರ್ವತಿ ಪಾಟೀಲ, ಶ್ರೀಮತಿ ಭುವನೇಶ್ವರಿ ಪೂಜೇರಿ ಇವರಿಗೆ  ಸಮಾಜ ಸೇವೆಗಾಗಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಹಾಗೂ ಡಾ| ಹೇಮಾ ಸೊನೊಳ್ಳಿ ಇವರಿಗೆ ಜನಪದ ಕ್ಷೇತ್ರದಲ್ಲಿ ರಾಷ್ಟ್ರೀಯ ಗಾನಗಂಧರ್ವ ಪಶಸ್ತಿ ನೀಡಿ ಬೆಂಗಳೂರಿನ  ರವೀಂದ್ರ ಕಲಾಕ್ಷೇತ್ರದಲ್ಲಿ ಗೌರವಿಸಲಾಯಿತು. 
        ಈ ಸಂದರ್ಭದಲ್ಲಿ ಶ್ರೀ ಗುರುಬಸವ ಸ್ವಾಮಿಗಳು, ಶ್ರೀ ದಿನೇಶ ಗುಂಡುರಾವ್, ಶಂಕರಪ್ಪನವರು, ಬಿ. ಎನ್.  ಚಂದ್ರಪ್ಪನವರು, ಮಹಾಂತೇಶ  ಮಲ್ಲನಗೌಡರು ಡಿ. ಎಸ್. ಅಶ್ವತ್ಥ, ಪ್ರತಿಷ್ಠಾನದ  ಅಧ್ಯಕ್ಷರಾದ  ರಮೇಶ ಸುರ್ವೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.