ಬೆಳ್ಳಿ ತಟ್ಟೆಯಲ್ಲಿ ಸಿಎಂ ಸಿದ್ದರಾಮಯ್ಯ ಉಪಹಾರ ಸೇವನೆ

ಬೆಳ್ಳಿ ತಟ್ಟೆಯಲ್ಲಿ ಸಿಎಂ ಸಿದ್ದರಾಮಯ್ಯ ಉಪಹಾರ ಸೇವನೆ

ತುಮಕೂರು,29: ಜಿಲ್ಲೆಯ ಮಧುಗಿರಿ ಕ್ಷೇತ್ರ ಶಾಸಕದ ಕೆ.ಎನ್ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಾತಿಥ್ಯವನ್ನು ನೀಡಿದ್ದು, ಸಿಎಂ ಬೆಳ್ಳಿ ತಟ್ಟೆಯಲ್ಲಿ ಉಪಹಾರ ಸೇವಿಸಿದ್ದಾರೆ.

ಗುರುವಾರ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಶಿರಾಗೆ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾವಹಿಸುವ ಮುನ್ನ ಕ್ಯಾತಸಂದ್ರದಲ್ಲಿರುವ ಮಧುಗಿರಿಯ ಶಾಸಕ ಕೆ.ಎನ್ ರಾಜಣ್ಣ ಅವರ ಮನೆಯಲ್ಲಿ ಬೆಳ್ಳಿ ತಟ್ಟೆ, ಲೋಟಾದಲ್ಲಿ ಉಪಹಾರ ಸೇವನೆ ಮಾಡಿದ್ದರು. ಅಲ್ಲದೇ ಸಿಎಂ ಕಾಫಿ ಹಾಗೂ ಡ್ರೈಫ್ರೂಟ್ ಸೇವಿಸಲು ನೀಡಿದ್ದ ವಸ್ತುಗಳು ಬೆಳ್ಳಿಯಿಂದ ತಯಾರು ಮಾಡಿದ್ದವು.

ಸಿಎಂ ಸಿದ್ದರಾಮಯ್ಯ ಅವರು ಸರಳ ಜೀವನ ಹಾಗೂ ಸಮಾಜವಾದಿ ಹಿನ್ನೆಲೆಯಿಂದ ಬೆಳೆದು ಬಂದ ನಾಯಕರಗಿದ್ದೂ, ಪ್ರಸ್ತುತ ಅವರು ಸ್ವೀಕರಿಸಿರುವ ರಾಜಾತಿಥ್ಯ ಭಾರೀ ಚರ್ಚೆಗೆ ಕಾರಣವಾಗಿದೆ.