2017-18ನೇ ಸಾಲಿನ ಸೇವಾ ಪುರಸ್ಕಾರಕ್ಕೆ ಆಯ್ಕೆ

2017-18ನೇ ಸಾಲಿನ ಸೇವಾ ಪುರಸ್ಕಾರಕ್ಕೆ ಆಯ್ಕೆ

ಬಾಗಲಕೋಟೆ,ನ.13:  ತಾಲೂಕಿನ ಗದ್ದನಕೇರಿ ಗ್ರಾಮ ಪಂಚಾಯತಿ ಗ್ರಂಥಾಲಯದ ಮೇಲ್ವಿಚಾರಕ ಕೆ.ವ್ಹಿ.ಗಡಗಡೆ ಇವರು 2017-18 ನೇ ಸಾಲಿನ ಸೇವಾ ಪುರಸ್ಕಾರ ಆಯ್ಕೆಯಾಗಿದ್ದಾರೆ.
 ಸತತ 13 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿದ್ದಕ್ಕಾಗಿ ಇವರ ಸೇವೆಯನ್ನು ಪರಿಗಣಿಸಿ 2017-18ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನಾ ಸಂದರ್ಭದಲ್ಲಿ ಕರ್ನಾಟಕ ಸರಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮೂಲಕ ನ.14ರಂದು ಬೆಳಿಗ್ಗೆ 10ಗಂಟೆಗೆ ಮಲ್ಲಿಕಾರ್ಜುನ ಮನ್ಸೂರು ಕಲಾ ಭವನ ಧಾರವಾಡದಲ್ಲಿ ನಡೆಯುವ ಸಿಬ್ಬಂಧಿ ಸೇವಾ ಪುರಸ್ಕಾರವನ್ನು ನೀಡಿ ಗೌರವಿಸಿ ಗ್ರಂಥಾಲಯ ಸಚಿವರಾದ ತನ್ವೀರ್‍ಸೇಠ್ ಪ್ರಶಸ್ತಿ ಪ್ರಧಾನ ಮಾಡುವರು.