ಸರ್ದಾರ ಭಗತಸಿಂಗ್ ರ ದೇಶಾಭಿಮಾನ ಇಂದಿನ ಯುವಕರಿಗೆ ಮಾದರಿಯಾಗಲಿ.    - ಮಹಾಂತೇಶ ಮಮದಾಪೂರ.

ಸರ್ದಾರ ಭಗತಸಿಂಗ್ ರ ದೇಶಾಭಿಮಾನ ಇಂದಿನ ಯುವಕರಿಗೆ ಮಾದರಿಯಾಗಲಿ.    - ಮಹಾಂತೇಶ ಮಮದಾಪೂರ.

ಬಾಗಲಕೋಟ,ಅ.3 ಇಂದಿನ ವೈಜ್ಞಾನಿಕ ದಿನಮಾನಗಳಲ್ಲಿ ನಮ್ಮ ಯುವಕರ ಸಾಕ್ಷರತೆಯ ಜ್ಞಾನ ಭಂಡಾರ ಹೆಚ್ಚಾಗುತ್ತಿದ್ದು, ಇದು ದೇಶದ ಮಾನವ ಸಂಪನ್ಮೂಲದ ಪ್ರಗತಿಗೆ ಪೂರಕವಾಗಿದೆ. ಇದರೊಂದಿಗೆ  ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ  ಜೀವವನ್ನೆ ತ್ಯಾಗ ಮಾಡಿದ ವೀರ ಭಗತಸಿಂಗ್ ದೇಶಾಭಿಮಾನವು ನಮ್ಮ ಯುವಕರಲ್ಲಿ ಮೊಳಕೆಯೊಡೆದು ನವಭಾರತ ಕಟ್ಟುವಲ್ಲಿ ಭಗತಸಿಂಗರ ರಾಷ್ಟ್ರಾಭಿಮಾನವು ಯುವಜನಾಂಗಕ್ಕೆ ಮಾದರಿಯಾಗಲಿ ಎಂದು ಭಾಜಪದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹಾಂತೇಶ ಮಮದಾಪೂರ ಹೇಳಿದರು.

         ಅವರು ಬಾದಾಮಿ ತಾಲೂಕಿನ ಕೊಟೇಕಲ್ಲ ಗ್ರಾಮದಲ್ಲಿ ಭಗತಸಿಂಗ್ ಸಾಂಸ್ಕøತಿಕ ಹಾಗೂ ಕ್ರೀಡಾ ಯುವ ಸಂಘದ ಆಶ್ರಯದಲ್ಲಿ ನೆಡೆದ ಭಗತ್ ಸಿಂಗ್ ರ  110 ನೇ ಜಯಂತ್ಯೋತ್ಸವ ಹಾಗೂ ಗ್ರಾಮದ ಭಾರತಿಯ ಸೈನಿಕರಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ವೀರ ಭಗತಸಿಂಗ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮುಂದುವರಿದು ಮಾತನಾಡಿ “ನನ್ನ ದೇಹವನ್ನು ನಾಶಪಡಿಸಬಹುದು ವಿನಃ ನನ್ನ ಸ್ವಾತಂತ್ರ್ಯದ ವಿಚಾರಗಳನ್ನು, ಚಿಂತನೆಗಳನ್ನು ನಿಮ್ಮಿಂದ ನಾಶಪಡಿಸಲು ಸಾಧ್ಯವಿಲ್ಲ.” ಎಂದು  ಬ್ರೀಟಿಷರಿಗೆ ಹೇಳಿದ ಭಗತಸಿಂಗ್ ರ ದಿಟ್ಟತನ, ಧೈರ್ಯವನ್ನು ಮೆಚ್ಚುವಂತದ್ದಾಗಿದೆ,   ಇಂದಿನ ಯುವಕರು ಇಂತಹ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಶ್ರಮ, ತ್ಯಾಗ, ಮತ್ತು ಉದ್ದೇಶಗಳನ್ನು ಅರಿತುಕೊಳ್ಳುವದರೊಂದಿಗೆ ಇಂದಿನ ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರಧಾನಿ ಮೋದಿಜೀಯವರ ಹಗಲಿರುಳು ಶ್ರಮಿಸಿತ್ತಿರುವದನ್ನು ಗಮನಿಸಿ, ಯುವಕರೆಲ್ಲರೂ ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಭವ್ಯ ಭಾರತವನ್ನು ಕಟ್ಟೋಣವೆಂದು ಹೇಳಿದರು.

    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಾದಾಮಿ ತಾಲೂಕಿನ ಭಾಜಪದ ಅಧ್ಯಕ್ಷರಾದ ಶಾಂತಗೌಡ ಪಾಟೀಲ ಅವರು ಮಾತನಾಡಿ ಭಗತಸಿಂಗರ ಕ್ರಾಂತಿಕಾರಿ ವಿಚಾರಗಳಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಬ್ರೀಟಿಷರಿಗೆ ಸಿಂಹಸ್ವಪ್ನವಾಗಿದ್ದ ಭಗತಸಿಂಗರ ಕೊನೆಯ ಗಳಿಗೆಯಲ್ಲಿಯೂ ನಗುನಗುತಾ ಜೈಲು ಅಧಿಕಾರಿಗಳಿಗೆ ಉತ್ತರಿಸಿದ ಅವರ ದಿಟ್ಟತನ, ದೈರ್ಯ, ಮತ್ತು ದೇಶಾಭಿಮಾನವನ್ನು ನಾವೆಲ್ಲ ಮೆಚ್ಚಲೇಬೇಕು. “  ನಾನು ಸತ್ತರು ಪರವಾಗಿಲ್ಲ, ನನ್ನಂತಹ ಸಾವಿರಾರು ಭಗತಸಿಂಗರು ಈ ತಾಯ್ನೆಲದಲ್ಲಿ ಹುಟ್ಟುತ್ತಾರ, ಅಂತಹ ಶಕ್ತಿ ನನ್ನ ಭಾರತ ಮಾತೆಗೆ ಇದೆ.” ಎಂದು ಭಗತಸಿಂಗ್ ಹೇಳೀದ ಮಾತು ಬ್ರೀಟಿಷರಿಗೆ ಭಯಬೀತಿಯನ್ನುಂಟು ಮಾಡಿತ್ತು. ಇಂತಹ ಅಪ್ಪಟ್ಟ ರಾಷ್ಟ್ರಾಭಿಮಾನಿ ವೀರ ಭಗತಸಿಂಗ್ ರ ಜಯಂತಿಯನ್ನು ಇಂದು ಅರ್ಥಪೂರ್ಣವಾಗಿ ಈ ಗ್ರಾಮದಲ್ಲಿ ಮುಂಜಾನೆಯಿಂದ “ಯುವಕರ ನಡೆಗೆ ಸ್ವಚ್ಛ ಭಾರತದೆಡೆಗೆ” ಕಾರ್ಯಕ್ರಮವನ್ನು ಮಾಡಿರುವುದು ಮತ್ತು ಇಳೆಸಂಜೆಯ ಮಳೆಯಲ್ಲಿ ಗುಳೇದಗುಡ್ಡದ ಶ್ರೀ ಅಂಭಾಭವನಿ ದೇವಸ್ಥಾನದಿಂದ ಕೋಟೆಕಲ್ಲದ ಶ್ರೀ ಹೋಳೆ ಹುಚ್ಚೇಶ್ವರ ಮಠದ ವರೆಗೆ ಬೈಕ್ ರ್ಯಾಲಿ ಮಾಡಿರುವುದು ಭಗತಸಿಂಗ್ ರ ಜಯಂತಿ ಸಮಾರಂಭಕ್ಕೆ ಮೆರಗು ತಂದದ್ದು ಹೆಮ್ಮಯ ವಿಷಯವಾಗಿದೆ, ಇದು ನಮ್ಮ ಜಿಲ್ಲೆÉಗೆ ಮಾದರಿ ಸಮಾರಂಭವಾಗಿದೆ ಎಂದು ಹೇಳಿದರು.

   ಈ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ  ಬಸವರಾಜ ಹಂಚಲಿ ಅವರು “ ಸ್ವಾತಂತ್ರ್ಯ ಹೋರಾಟಕ್ಕೆ ಭಗತಸಿಂಗ್ ರ ಕೊಡುಗೆ.”  ಎಂಬ ವಿಷಯ ಕುರಿತು ಭಗತ್ ಸಿಂಗ್ ರ ಬಾಲ್ಯ ಜೀವನ ಮತ್ತು ಸ್ವಾತಂತ್ರ್ಯ ಹೋರಾಟದ ಸನ್ನಿವೇಶಗಳನ್ನು ಯುವಕರಿಗೆ ಮನಮುಟ್ಟುವಂತೆ ತಿಳಿಸಿದರು.

      ಈ ಸಮಾರಂಭದಲ್ಲಿ ಗ್ರಾಮದ ಭಾsÀರತೀಯ ಸೈನಿಕರಿಗೆ ಗೌರವ ಸನ್ಮಾನವನ್ನು ಮಾಡಲಾಯಿತು. ಸಮಾರಂಭದಲ್ಲಿ ಗುಳೇದಗುಡ್ಡ ಪುರಸಭೆ ಅಧ್ಯಕ್ಷರಾದ ಶಿವುಕುಮಾರ ಹಾದಿಮನಿ, ಎಪಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ರೇಣವ್ವ ಬಾಲಪ್ಪ ಮದಕಟ್ಟಿ,  ಭಾಜಪದ ಯುವ ನಾಯಕರಾದ ಸಂಪತ್ತಕುಮಾರ ರಾಠಿ, ಕಮಲಕೀಶೊರ ಮಾಲಪಾಣಿ, ರಾಜು ದೇಸಾಯಿ, ಶಶಿಧರ ದೇಸಾಯಿ, ಗುರುರಾಜ ಅಂಗಡಿ, ಸಂಗಪ್ಪ ಆಲೂರ, ಯಮನಪ್ಪ ಅರಮನಿ, ಮಲ್ಲು ಬಾದಾಮಿಮಠ, ಡಾ.ಶಿವು ಗಂಗಲ, ಅರ್ಜುನ ಪಾಚಂಗಿ, ಮಲ್ಲು ಕುಂಬಾರ ಹಾಗೂ ಕಾರ್ಯಕ್ರಮ ಸಮಚಾಲಕ ಯಮನೂರಿ ಕಂಬಾರ ಮುಂತಾದವರು ಉಪಸ್ಥಿತರಿದ್ದರು.

     ಪ್ರವೀಣ ದೇವಣಕರ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಭಾಜಪದ ಯುವ ಧುರಿಣರಾದ ಶ್ರೀಶೈಲ ಕುಂಬಾರ ಸ್ವಾಗತ ಮಾಡಿದರು. ಭುವನೇಶ ಪೂಜಾರ ಪ್ರಾಸ್ತಾವಿಕ ಮಾತನಾಡಿದರು. ವಿನೋದ ಗಾಜಿಯವರ ಮಾಲಾರ್ಪಣೆ ನೆಡೆಸಿದರು. ಪ್ರೊ. ಚಂದ್ರಶೇಖರ ಕಾಳನ್ನವರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.