ಬಿಬಿಎಂಪಿಯ 51ನೇ ಮೇಯರ್ ಆಗಿ ಸಂಪತ್ ರಾಜ್ ಆಯ್ಕೆ

ಬಿಬಿಎಂಪಿಯ 51ನೇ ಮೇಯರ್ ಆಗಿ ಸಂಪತ್ ರಾಜ್ ಆಯ್ಕೆ

ಬೆಂಗಳೂರು,ಸೆ.28: ಬಿಬಿಎಂಪಿಯ 51ನೇ ಮೇಯರ್​​ ಆಗಿ ಸಂಪತ್​ ರಾಜ್​ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಪಾಲಿಕೆಯಲ್ಲಿ  ಕಾಂಗ್ರೆಸ್​​-ಜೆಡಿಎಸ್​ ದೋಸ್ತಿಗೆ ಜಯವಾಗಿದೆ. ಈ ಮೂಲಕ ಅಧಿಕಾರದ ಕನಸು ಕಂಡಿದ್ದ ಬಿಜೆಪಿಗೆ ತೀವ್ರ ನಿರಾಸೆಯಾಗಿದೆ.

ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಮುಗಿದಿದ್ದು, ಕಾಂಗ್ರೆಸ್​​-ಜೆಡಿಎಸ್​ ಈ ಮೇಯರ್​ ವಾರ್​ ಗೆದ್ದಿದೆ. 51ನೇ ಮೇಯರ್​ ಆಗಿ ಕಾಂಗ್ರೆಸ್ ಪಕ್ಷದ ಸಂಪತ್​ ರಾಜ್​ ಆಯ್ಕೆಯಾಗಿದ್ದು, ಉಪ ಮೇಯರ್​ ಹುದ್ದೆ ಜೆಡಿಎಸ್​ ಪಾಲಾಗಿದೆ.

ಡಿ.ಜೆ.ಹಳ್ಳಿಯಿಂದ 2 ಬಾರಿ ಕಾರ್ಪೊರೇಟರ್​ ಆಗಿರುವ ಸಂಪತ್​ ರಾಜ್​​​ ಈ ಬಾರಿ ಬಿಬಿಎಂಪಿಯ ಮೇಯರ್​​ ಆಗದ್ದಾರೆ. ಬಿಪಿ ಸಭಾತ್ಯಾಗ ಮಧ್ಯೆಯೇ ಚುನಾವಣಾಧಿಕಾರಿ ಜಯಂತಿಯವರು ಸಂಪತ್​ ರಾಜ್'ರನ್ನು ನೂತನ ಮೇಯರ್ ಆಗಿ ಅಧಿಕೃತವಾಗಿ ಘೋಷಿಸಿದ್ದಾರೆ.