ಸದಾಶಿವ ಆಯೋಗದ ವರದಿ ಶಿಫಾರಸಿಗೆ ಒತ್ತಾಯ

ಸದಾಶಿವ ಆಯೋಗದ ವರದಿ ಶಿಫಾರಸಿಗೆ ಒತ್ತಾಯ

ಮುಧೋಳ,ಡಿ.12: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳ  ಅನುಷ್ಠಾನ್ಕಕೆ ಒತ್ತಾಯಿಸಿ ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು.
ಕೂಡಲಸಂಗಮದಿಂದ  ಕಾಲ್ನಡಿಗೆ ಮೂಲಕ ಜಾಥಾ ಕೈಗೊಂಡಿದ್ದು 125 ಮಂದಿಯನ್ನು ಬಾಪೂಜಿನಗರದಿಂದ ಮೆರವಣಿಗೆಯಲ್ಲಿ ಸ್ವಾತಂತ್ರ್ಯ ಉದ್ಯಾನವನಕ್ಕೆ ಕರೆತರಲಾಯಿತು. ಮಾದಿಗ ಸಮುದಾಯವು ಸಾಮಾಜಿಕ, , ಹಾಗೂ ಶೈಕ್ಷಣಿಕವಾಗಿ  ಹಿಂದುಳಿದಿದೆ. ಹಿಂದುಳಿದ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ ತುರ್ತು ಅವಶ್ಯಕತೆ ಇದೆ. ಇದೆಲ್ಲವೂ ಸದಾಶಿವ ಆಯೋಗದ ವರದಿ ಅನುಷ್ಠಾನದಿಂದ ಮಾತ್ರ ಸಾಧ್ಯ. ಹೀಗಾಗಿ ಸರ್ಕಾರ ಈ ವರದಿಯನ್ನು ಅಂಗಿಕರಿಸಬೇಕು.  ವರದಿಯ ಶಿಫಾರಸ್ಸುಗಳ ತ್ವರಿತವಾಗಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಪ್ರತಿಭನಾಕಾರರು ಒತ್ತಾಯಿಸಿದ್ದರು.