ರೈತರಿಗೆ ಸಮಗ್ರ ಕೃಷಿ ಮಾಡಲು ವಿನಂತಿ

ರೈತರಿಗೆ ಸಮಗ್ರ ಕೃಷಿ ಮಾಡಲು ವಿನಂತಿ

ವಿಜಯಪುರ ಜೂ.15: ಮುಂಗಾರು ಮಳೆ ಬಿರುಸಿನಿಂದ ಕೂಡಿದ್ದು, ರೈತರು ಎಲ್ಲ ತರಹದ ಸಮಗ್ರ ಬೆಳೆಗಳನ್ನು ಬಿತ್ತನೆ ಮಾಡಬೇಕು. ಒಣ ಬೇಸಾಯ ಹಾಗೂ ನೀರಿನ ಮೂಲಕ ಬೆಳೆಯುವ ಎಲ್ಲ ತರಹ ಬೆಳೆಗಳನ್ನು ತಮ್ಮ ತೋಟಗಳಲ್ಲಿ ಬೆಳೆಯಬೇಕು.

ರೈತ ಮಹಿಳೆಯರು ಎಲ್ಲ ತರಹದ ಕಾಯಿಪಲ್ಲೆ, ದ್ವೀದಳ ದಾನ್ಯ ಹಾಗೂ ತರಕಾರಿಗಳನ್ನು ತಮ್ಮ ತೋಟಗಳಲ್ಲಿ ಬೆಳೆದು ಜೀವನ ಉಪಯೋಗಕ್ಕೆ ತೊಂದರೆಯಾಗದ ರೀತಿಯಲ್ಲಿ ಬೆಳೆಗಳನ್ನು ಬೆಳೆದು ಜೀವನವನ್ನು ಸಾಗಿಸಬೇಕು. ರೈತರು ತಮ್ಮ ತೋಟದಲ್ಲಿ ಕೃಷಿ ಹೊಂಡವನ್ನು ಕಡ್ಡಾಯವಾಗಿ ನಿರ್ಮಿಸಿ ನೀರನ್ನು ಸಂಗ್ರಹಿಸಬೇಕು. ಕುರಿ ಸಾಕಾಣಿಕೆ ಹಾಗೂ ಹಸು ಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡಬೇಕು. ಸಾವಯವ ಕೃಷಿಗೆ ಒತ್ತು ಕೊಡಬೇಕು. ಸರ್ಕಾರ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು.

 ಉದಾ: ಪಾನಶಾಫನಲ್ಲಿ ಎಲ್ಲ ತರಹದ ವಸ್ತುಗಳು ಹಾಗೂ ಹಣ್ಣುಗಳು ಮಾರಾಟ ಮಾಡುತ್ತಾರೆ. ಅದರಿಂದ ಒಂದರಿಂದ ಒಂದು ವ್ಯಾಪಾರ ವೃದ್ಧಿಗೊಳ್ಳುತ್ತದೆ. ಅದೇ ರೀತಿ ರೈತರು ಸಮಗ್ರ ಕೃಷಿಯನ್ನು ಬೆಳೆದು ತಮ್ಮ ಜೀವನವನ್ನು ಸಾಗಿಸಬೇಕು.