ಕನ್ನಡ ಭವನ ನಿರ್ಮಾಣಕ್ಕೆ ಆಗ್ರಹಿಸಿ ಸಾಂಸ್ಕøತಿಕ ವೇದಿಕೆಯಿಂದ ಮನವಿ

ಕನ್ನಡ ಭವನ ನಿರ್ಮಾಣಕ್ಕೆ ಆಗ್ರಹಿಸಿ ಸಾಂಸ್ಕøತಿಕ ವೇದಿಕೆಯಿಂದ ಮನವಿ

 ವಿಜಯಪುರ,ಸೆ.1: ಗಡಿನಾಡು ಜಿಲ್ಲೆಯಾದ ವಿಜಯಪುರದಲ್ಲಿ ಕನ್ನಡ ಭವನ ನಿರ್ಮಾಣ, ಕಿತ್ತೂರ ರಾಣಿ ಚೆನ್ನಮ್ಮ ನಾಟ್ಯ ಮಂದಿರ ಮರು ನಿರ್ಮಾಣ ಮತ್ತು ಹಂದಿಗನೂರ ಸಿದ್ರಾಮಪ್ಪನವರ ಬಯಲು ರಂಗಮಂದಿರ ನಿರ್ಮಿಸುವಂತೆ ಒತ್ತಾಯಿಸಿ ಜಿಲ್ಲಾ ಸಾಂಸ್ಕøತಿಕ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮನೆಗೆ ತೆರಳಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಆರ್.ಜಿ.ಮೇಡೆಗಾರ ಮಾತನಾಡಿ, ಬಸವನಾಡು ವಿಜಯಪುರ ಜಿಲ್ಲೆ ಐತಿಹಾಸಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೇ ಬೃಹತ್ ನಗರವಾಗಿಯೂ ಬೆಳವಣಿಗೆಯನ್ನು ಪಡೆಯುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯ ತೋಟಗಾರಿಕೆ ಉತ್ಪನ್ನಗಳು ಸಹ ಇಲ್ಲಿ ಬೆಳೆಯಲಾಗುತ್ತಿದೆ. ಶರಣ ಸಂತರ, ಕವಿ ಕಲಾವಿದರ, ಸಾಹಿತಿಗಳ ತವರ ಜಿಲ್ಲೆ ಇದಾಗಿದ್ದು, ಮಹಾರಾಷ್ಟ್ರ ರಾಜ್ಯಕ್ಕೆ ತೀರ ಹತ್ತಿರವಾದ ಗಡಿನಾಡು ಜಿಲ್ಲೆ ಇದಾಗಿದ್ದು, ಕಾರಣ ಇಲ್ಲಿ ಕನ್ನಡ ಭವನ ನಿರ್ಮಾಣವಾಗುವುದು ಅತೀ ಅವಶ್ಯಕವಾಗಿದೆ ಎಂದು ಮನವರಿಕೆ ಮಾಡಿಕೊಂಡರು.
ವೇದಿಕೆ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ರಂಗ ಕಲಾವಿದರಿಗಾಗಿ ಇರುವುದು 2 ರಂಗಮಂದಿರಗಳು ಒಂದು ಬೆಂಗಳೂರಿನ ಗುಬ್ಬಿವೀರಣ್ಣ ನಾಟ್ಯ ಮಂದಿರ ಹೊರತುಪಡಿಸಿದರೆ ಇನ್ನೊಂದು ವಿಜಯಪುರ ನಗರದ ಕಿತ್ತೂರರಾಣಿ ಚನ್ನಮ್ಮ ನಾಟ್ಯ ಆಗಿರುತ್ತದೆ. ಇಲ್ಲಿ ನಾಡಿನ ಅನೇಕ ಪ್ರಸಿದ್ಧಿ ಪಡೆದ ಚಲನ ಚಿತ್ರ ನಟನಟಿಯರು ಅಭಿನಯಿಸಿ ಪ್ರಸಿದ್ಧಿ ಪಡೆದಿದ್ದಾರೆ. ಅಲ್ಲದೆ ರಂಗ ಕಲಾವಿದರ ತವರು ಜಿಲ್ಲೆ ಇದಾಗಿದ್ದು, ಸದ್ಯ ಮಹಾನಗರ ಪಾಲಿಕೆಯು ಮರು ನಿರ್ಮಾಣದ ಹೆಸರು ಹೇಳಿ ಒಂದು ವಾಣಿಜ್ಯ ಮಳಿಗೆಯನ್ನು ನಿರ್ಮಿಸುವ ಹುನ್ನಾರದಲ್ಲಿದ್ದಾರೆ. ಕಾರಣ ರಂಗ ಕಲಾವಿದರ ಬದುಕನ್ನು ಹಸನಾಗಿಸಲು ಯಥಾವತ್ತಾಗಿ ಕಿತ್ತೂರ ಚನ್ನಮ್ಮ ನಾಟ್ಯ ಮಂದಿರವನ್ನು ಮರುನಿರ್ಮಾಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. 
ವೇದಿಕೆಯ ಉಪಾಧ್ಯಕ್ಷ ಎಲ್.ಬಿ.ಶೇಖ (ಮಾಸ್ತರ್) ಮಾತನಾಡಿ, ವಿಜಯಪುರ ಹೃದಯಭಾಗದಲ್ಲಿರುವ ಕಂದಗಲ್ ಹಣಮಂತರಾಯ ರಂಗಮಂದಿರ ಸಂಪೂರ್ಣವಾಗಿ ಅವವ್ಯವಸ್ಥೆಯಿಂದ ಕೂಡಿದ್ದು ಅಲ್ಲಿ ಕುಡಿಯುವ ನೀರಿನ ಸೌಲಭ್ಯ, ಅವಶ್ಯಕತೆಗೆ ಅನುಗುಣವಾದ ವಿದ್ಯುತ್ ಸೌಕರ್ಯ ಅಲ್ಲದೇ ಅಲ್ಲಿ ವಾಹನಗಳ ನಿಲುಗಡೆ ಸ್ಥಳ ಮತ್ತು ಹೈಮಾಸ್ಕ ದೀಪ, ರಂಗಮಂದಿರ ರಕ್ಷಣೆಗಾಗಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು. ರಂಗಮಂದಿರ ಒಂದಿಲ್ಲೊಂದು ಸಾಂಸ್ಕøತಿಕ ಚಟುವಟಿಕೆಗಳಿಂದ ಕೂಡಿರುತ್ತದೆ. ಇಲ್ಲಿಗೆ ಬರುವ ಮಕ್ಕಳು, ಮಹಿಳೆಯರು, ವೃದ್ಧರು ಸಂಚರಿಸಲು ಮುಖ್ಯ ರಸ್ತೆ ಅಪಘಾತದ ಆತಂಕ ತಂದೊಡ್ಡಿದ್ದರಿಂದ ಅಲ್ಲಿ ಸೂಕ್ತವಾದ ವೇಗ ತಡೆ ನಿರ್ಮಾಣವಾಗಬೇಕು ಸಕಲ ಸೌಕರ್ಯಗಳನ್ನೊಳಗೊಂಡ ಮಾದರಿ ರಂಗಮಂದಿರ ಇದಾಗಬೇಕು ಎಂದು ವಿನಂತಿಸಿದರು.
ಎಲ್ಲ ಪದಾಧಿಕಾರಿಗಳು ಕಂದಗಲ ರಂಗಮಂದಿರದ ಹಿಂದಿನ ಬಯಲು ಜಾಗೆಯಲ್ಲಿ ಕಳೆದ ಬಾರಿ ಜಿಲ್ಲೆಯ ಖ್ಯಾತ ರಂಗ ನಟರಾದ ಹಂದಿಗನೂರ ಸಿದ್ರಾಮಪ್ಪನವರ ಹೆಸರಿನ ಬಯಲು ರಂಗಮಂದಿರ ಶಂಕುಸ್ಥಾಪನೆಗೊಂಡಿದ್ದು, ಸದ್ಯಕ್ಕೆ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ ಬೇಗನೆ ಈ ಬಯಲು ರಂಗಮಂದಿರವನ್ನು ನಿರ್ಮಿಸಿ ಕಲಾವಿದರಿಗೆ ಕಲಾ ಪ್ರದರ್ಶನ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಾಯಬಣ್ಣ ಮಡಿವಾಳರ, ಡಿ.ಎಚ್.ಕೋಲಾರ, ಪ್ರಕಾಶ ಕುಂಬಾರ, ಓ.ಎಸ್. ಬಿರಾದಾರ, ದಸ್ತಗೀರ ಸಾಲೋಟಗಿ, ಬಸವರಾಜ ಒಂಟಿಗೋಳ, ಸಿದ್ದು ನಾಲತವಾಡ, ಮಹಾಂತೇಶ ಸಾಲಿಮಠ, ರಂಗನಾಥ ಅಕ್ಕಲಕೋಟ, ನಂದಾ ಹಿರೇಮಠ, ಲೋಲಮ್ಮ ಬಿರಾದಾರ, ಶಾರದಮ್ಮ ಪಾಟೀಲ, ಶ್ರೀಧರ ಹೆಗಡೆ, ನಿಜಗುಣಿ ಬೆಂಗಳೂರು, ಅಂಬುಜಾ ಬೆಂಗಳೂರು, ಸುಭದ್ರಮ್ಮ ಕರಜಗಿ, ಟಿ.ಎಸ್.ರಜಪೂತ, ಚೆನ್ನಪ್ಪ ಆರ್., ಉಮಾ ಹಿರೇಮಠ, ವೀರೇಶ ಹಿರೇಮಠ, ನೇತಾ ಹೀರೇಮಠ, ಈರಣ್ಣ ನಿಂಬಾಳ, ಶಾಂತಮ್ಮ ಯಂಕಂಚಿ, ಶಾಂತಗೌಡ ಪಾಟೀಲ ಸೇರಿದಂತೆ ಮುಂತಾದ ರಂಗ ಕಲಾವಿದರು ಉಪಸ್ಥಿತರಿದ್ದರು.