ಆರ್‌.ಬಿ. ತಿಮ್ಮಾಪುರ್‌ ಅವರ ತಾಯಿ ಸತ್ಯವ್ವ ಬಾಲಪ್ಪ ತಿಮ್ಮಾಪುರ್ ನಿಧನ

ಆರ್‌.ಬಿ. ತಿಮ್ಮಾಪುರ್‌ ಅವರ ತಾಯಿ ಸತ್ಯವ್ವ ಬಾಲಪ್ಪ ತಿಮ್ಮಾಪುರ್ ನಿಧನ

ಬಾಗಲಕೋಟೆ, ಅ.11: ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ್‌ ಅವರ ತಾಯಿ ಸತ್ಯವ್ವ ಬಾಲಪ್ಪ ತಿಮ್ಮಾಪುರ್‌(75) ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮುಧೋಳ ತಾಲೂಕು ಉತ್ತೂರ ಗ್ರಾಮದ ಮನೆಯಲ್ಲಿ ಸತ್ಯವ್ವ ವಾಸವಿದ್ದರು. ಅನಾರೋಗ್ಯ ಇದ್ದ ಕಾರಣ ಅವರನ್ನು ಮುಧೋಳದ ತಲಾಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಸಮಯದಲ್ಲಿ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 
ಧಾರವಾಡ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವ ತಿಮ್ಮಾಪುರ್ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಸ್ವಗ್ರಾಮ ಉತ್ತೂರಿನಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.