ಉಪಾಧ್ಯಕ್ಷರಾಗಿ ಆರ್.ಎಮ್. ಮೇತ್ರಿ ಆಯ್ಕೆ 

ಉಪಾಧ್ಯಕ್ಷರಾಗಿ ಆರ್.ಎಮ್. ಮೇತ್ರಿ ಆಯ್ಕೆ 

 ವಿಜಯಪುರ ಡಿ,09: ಕರ್ನಾಟಕ ರಾಜ್ಯ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಘಟಕ ಹುಬ್ಬಳ್ಳಿ, ದಿನಾಂಕ : 15-10-2017 ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವಿಜಯಪುರ ಜಿಲ್ಲೆಯ ಶಿಕ್ಷಕ ಆರ್.ಎಮ್. ಮೇತ್ರಿ ಇವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ರೇವಪ್ಪ ಕಲಶೆಟ್ಟಿ, ಎಸ್.ಜಿ. ಸಜ್ಜನ,ಶಿವಾನಂದ ನ್ಯಾಮಗೊಂಡ ಜಿ.ಓ.ಸಿ.ಸಿ. ಬ್ಯಾಂಕ್, ಶ್ರೀಮತಿ ಎಸ್.ಎಸ್. ಪಾಟೀಲ, ಶ್ರೀಮತಿ ಸುವರ್ಣಾ ಕಾಂತು ಮೇತ್ರಿ ಇವರು ಆಯ್ಕೆಗೊಂಡಿರುತ್ತಾರೆ. 
ಇವರ ಈ ಆಯ್ಕೆಗೆ ಜಿಲ್ಲಾ ಗಾಣಿಗ ಸಮಾಜ ನೌಕರರ ಸೇವಾ ಸಂಘ (ರಿ) ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಾಂತ ಡೊಣಗಿ ಹಾಗೂ ಜಿಲ್ಲಾ ಗಾಣಿಗ ಸಮಾಜದ ನೌಕರರ ಸಂಘದ ಅದ್ಯಕ್ಷರಾದ ಎಮ್.ಎಸ್. ಮೊಸಲಗಿ, ಬಿ.ಪಿ. ಹಾಳಕಿ, ರೇವಪ್ಪ ಮಸಳಿ, ಬಿ.ಎಸ್. ಮಖಣಾಪೂರ, ಬಿ.ಆರ್.ಪಿ. ಎಸ್.ಎಸ್. ಬೋರಗಿ, ಐ.ಇ.ಆರ್.ಟಿ. ಆಯ್.ಎ. ತೇಲಿ ನಿರ್ದೇಶಕರು ಜಿ.ಓ.ಸಿ.ಸಿ. ಬ್ಯಾಂಕ್, ಸಿ.ಟಿ. ಜತ್ತಿ ಅಧ್ಯಕ್ಷರು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗ್ರಾಮೀಣ ವಲಯ, ವಿಜಯಪುರ, ಪಿ.ಡಿ. ಹಾವಳಗಿ ಅಭಿನಂದನೆ ಸಲ್ಲಿಸಿದ್ದಾರೆ.