ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಿ: ಕಟ್ಟಿಮನಿಯವರಿಗೆ ಮನವಿ

ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಿ: ಕಟ್ಟಿಮನಿಯವರಿಗೆ ಮನವಿ

ವಿಜಯಪುರ,ಅ.17: ಕರ್ನಾಟಕ ರಾಜ್ಯದಲ್ಲಿ ಜಿಲ್ಲಾಧ್ಯಾಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ವಿಫಲವಾಗಿರುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಿ ದಲಿತರಿಗೆ ಸೂಕ್ತನ್ಯಾಯ ಕೊಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಪ್ತ ಸಹಾಯಕರಾದ ಕಟ್ಟಿಮನಿಯವರಿಗೆ ಮನವಿ ಸಲ್ಲಿಸಲಾಯಿತು. 
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಶಾಸ್ತ್ರೀ ಹೊಸಮನಿ ಮಾತನಾಡಿ, ಬಹಳ ವರ್ಷಗಳಿಂದ ಕರ್ನಾಟಕದಲ್ಲಿ ದಲಿತರ ಮೇಲೆ ರಾಜ್ಯಾದ್ಯಾಂತ ಹಲ್ಲೆಗಳು ನಡೆಯುತ್ತಿವೆ. ವಿಪರ್ಯಾಸವೆಂದರೆ, ಅಹಿಂದ ಪರ ಇದ್ದೇವೆ ಅಂತಾ ಹೇಳಿಕೊಳ್ಳುವ ಸಿದ್ರಾಮಯ್ಯನವರ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ದಲಿತರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣಗಳು ಜಾಸ್ತಿ ಆಗಿವೆ. 
    ಹಾಗೇ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಲೂಕಿನ ಮಟ್ಯಾಳ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿ ದಲಿತರಿಗೆ ಉಳಿಮೆ ಮಾಡಲು ಭೂಮಿ ನೀಡಬೇಕು ಹಾಗೂ ಇತರೆ ಬೇಡಿಕೆಗಳೊಂದಿಗೆವಿಜಯಪುರ ಜಿಲ್ಲೆಯ ಉಸ್ತುವಾರಿ ಮತ್ರಿಗಳಾದ ಎಂ.ಬಿ. ಪಾಟೀಲರವರ ಮನೆಗೆ ಮಟ್ಯಾಳ ಗ್ರಾಮದಿಂದ ಕಾಲ್ನಡಿಗೆ ಮುಖಾಂತರ ಮನವಿ ನೀಡಿದ್ದೇವು ಆಗ ಮೊನ್ನೆ ಎಂ.ಬಿ. ಪಾಟೀಲವರು ಈ ಪ್ರಸ್ತಾಪವನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಅವರ ಜೊತೆ ಮಾತನಾಡಿ, ದಲಿತರಿಗೆ ಭೂಮಿಯನ್ನು ನೀಡುವ ಮುಖಾಂತರ ನ್ಯಾಯ ಒದಗಿಸಿಕೊಡುತ್ತೇನೆಂದು ಭರವಸೆ ಕೊಟ್ಟಿದ್ದರು ಅದು ಸಹಿತ ಈಡೇರಿಲ್ಲ. 
    ದಿನಾಂಕ 24-09-2017 ರಂದು ಟಾಟಾ ಕಂಪನಿಯ ಸಹಯೋಗದ ಚಿರಸ್ಥಾಯಿ ಸೋಲಾರ ವಿದ್ಯುತ್ ಕಂಪನಿಯ ಪರವಾಗಿ ಕೊಪ್ಪಳ ಜಿಲ್ಲೆಯ ಗಗಾವತಿ ತಾಲೂಕಿನ ಕನಕಗಿರಿ ಹೋಬಳಿಯ ತಿಪ್ಪನಾಳ ಕೆರೆಭೂಮಿಗೆ ನುಗ್ಗಿದ ಪೊಲೀಸ್ ಅಧಿಕಾರಿಗಳು ದಲಿತ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ತೊಂಬತ್ತಾರು ಎಕರೆ ಭೂಮಿಯಲ್ಲಿ ಕಟಾವು ಹಂತಕ್ಕೆ ಬಂದಿದ ಬೆಳೆಯನ್ನು ನಾಶಮಾಡಿದ್ದಲ್ಲದೆ 18 ಜನ ದಲಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗಿದೆ ಎಂದರು. 
    ಕೋಟ್ ಆದೇಶಕ್ಕೆ ಒಳಪಡದ 49 ಎಕರೆ ಭೂಮಿಯನ್ನು ಬಿಟ್ಟುಕೊಡಲು ಒತ್ತಾಯಿಸಿ ದಿ. 27-09-2017 ರಿಂದ ದಲಿತರ ಮಹಿಳೆಯರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹಗಲು ರಾತ್ರಿ ಸದರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಆದರೂ ಇನ್ನು ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರಕಿಲ್ಲ. ದಲಿತರ, ಶೋಷಿತರ, ಬಡವರ ಪರವಾಗಿ ಇರಬೇಕಾದಂತಹ ಜಿಲ್ಲಾ ಆಡಳಿತ ದಲಿತ ವಿರೋಧ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯ ವಿಷಯವಾಗಿದೆ. 
    ಈ ಸಂದರ್ಭದಲ್ಲಿ ಮಂಜು ಜಂಬಗಿ, ಚಂದ್ರಾಮ ಮೇಲಿನಕೇರಿ, ರಾಯಪ್ಪ ದಾವಾಪೂರ, ಉಮೇಶ ಹೊಸಮನಿ, ಲಾಲಾಪ್ಪ ದನರಗಿ, ಮಹೇಂದ್ರ ಕುದರಿ, ಸುರೇಶ ಕಾಂಬಳೆ, ಯಲ್ಲಪ್ಪ ಚಲವಾದಿ, ಚಂದ್ರಶೇಖರ ಮಲಕಣ್ಣವರ, ಮತಿನ ದೇವದಾರ, ಶ್ರೀಧರ ಹಾಲ್ಯಾಳ ಮುಂತಾದವರು ಉಪಸ್ಥಿತರಿದ್ದರು.