ಪಕ್ಷಾತೀತವಾಗಿ ರಾಜ್ಯೋತ್ಸವ ಹಬ್ಬ ಆಚರಿಸಿ ಸಂಭ್ರಮಿಸಿದ ಜನತೆ

 ಪಕ್ಷಾತೀತವಾಗಿ ರಾಜ್ಯೋತ್ಸವ ಹಬ್ಬ ಆಚರಿಸಿ ಸಂಭ್ರಮಿಸಿದ ಜನತೆ

ಗದ್ದನಕೇರಿ,ನ.07:    ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಬಂತೆಂದರೆ ಬಾಗಲಕೋಟೆ ತಾಲೂಕಿನ  ಗದ್ದನಕೇರಿ ಗ್ರಾಮದಲ್ಲಿ ಮನೆ ಮನೆಗಳಲ್ಲಿ ಹಬ್ಬ, ಬೀದಿಗಳಲ್ಲಿ ರಂಗೋಲಿ,  ತೋರಣ ತನಿರುಗಳಿಂದ ಶೃಂಗರಿಸಿ ಗ್ರಾಮದ ಗುರು ಹಿರಿಯರು ಜ್ಯಾತ್ಯಾತೀತವಾಗಿ ಪಕ್ಷಾತೀತವಾಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
    ಗ್ರಾಮದ ಆರಾಧ್ಯ ದೇವರಾದ ಮೌನೇಶ್ವರ ಮಹಾಸ್ವಾಮಿಗಳು ಮಹಾಪುರುಷ ಇವರನ್ನು ಡೊಳ್ಳು ಹಾಗೂ ನಗಾರಿಗಳ ಮೂಲಕ ಗ್ರಾಮದೊಳಗೆ ಕುದುರೆಯ ಮೇಲೆ ಸ್ವಾಗತಿಸಿಕೊಂಡು ಗ್ರಾಮದ ಹಿರಿಯರಾದ ಶಂಭುಗೌಡ ಪಾಟೀಲ ಇವರ ಗೋ ಮಾತೆಯನ್ನು ಪ್ರಥಮದಲ್ಲಿ ಪೂಜಿಸಿ, ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಅಜ್ಜನವರನ್ನು ಮೆರವಣಿಗೆ ಮಾಡಲಾಯಿತು.
  ತಾಲೂಕ ಪಂಚಾಯತ ಸದಸ್ಯೆ  ಮೀನಾಕ್ಷಿ ಹಲಕುರ್ಕಿ ಇವರಿಂದ ತಾಯಿ ಭುವನೇಶ್ವರಿ ದೇವಿಯ ಭಾವ ಚಿತ್ರದ ಮೆರವಣಿಗೆಯ ಚಾಲನೆ ಉದ್ಘಾಟನೆ ಮಾಡಲಾಯಿತು. ನಂತರ ಗ್ರಾಮ ಪಂಚಾಯತ ಅಧ್ಯಕ್ಷ ಸಿದ್ಧನಗೌಡ ಜಕ್ಕನಗೌಡರ ರೈತರಿಗೆ ಸಸಿಗಳನ್ನು ಕೊಡುವದರ ಮೂಲಕ  ಹಾಗೂ ಪಾರಿವಾಳಗಳನ್ನು, ಪುಷ್ಪಗಳನ್ನು  ಹಾರಿಸುವುದರ ಮೂಲಕ ಭಾವಚಿತ್ರಕ್ಕೆ ಚಾಲನೆ ನಿಡಿದರು.
  ಡೊಳ್ಳು ಕುಣಿತ ಹಾಗೂ ಮೋಜು ಮಜಲುಗಳನ್ನು ಒಳಗೊಂಡು 25 ಜೋಡು ಎತ್ತಿನ ಬಂಡಿಯೊಂದಿಗೆ ಗ್ರಾಮದ ಅಗಸಿಯಿಂದ ಗದ್ದನಕೇರಿ ಕ್ರಾಸ್‍ದ ವರೆಗೆ ಕನ್ನಡ ಬಾವುಟಗಳೊಂದಿಗೆ ಯುವಕರು ಹಾಗೂ ಗುರುಹಿರಿಯರು ನೃತ್ಯವಾಡುತ್ತ ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು ಎಂಬ ಗೀತೆಗೆ ಹೆಜ್ಜೆ ಹಾಕುತ್ತ ಕನ್ನಡದ ಬಾವುಟಗಳನ್ನು ಹಾರಿಸುತ್ತ ಸಂಭ್ರಮಿಸಿದರು ಶ್ರೀ ಹುಚ್ಚೇಶ್ವರ ಪ್ರಾಥಮಿಕ ಶಾಲೆಯ ಚಿನ್ನರಿಂದ ವಿವಿಧ ವೇಷ ಭೂಷಣ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
  ಗ್ರಾ.ಪಂ. ಎಲ್ಲಾ ಸದಸ್ಯರು, ಹಿರಿಯರಾದ ಶೇಖರಯ್ಯ ಹಿರೇಮಠ, ಮಹಾದೇವಪ್ಪ ಕರಡಿಗುಡ್ಡ, ಸಿದ್ದಪ್ಪ ಬಳುಲದ, ಅಡಿವೆಪ್ಪ ಅಪ್ಪನ್ನವರ, ಎ.ಆರ್.ಪೂಜಾರಿ, ಎಚ್.ಎನ್.ಅಮರಗಟ್ಟಿ, ಶಂಕ್ರಪ್ಪ ಬಡಿಗೇರ, ಗದಿಗೆಪ್ಪ ಹೊನ್ನಳ್ಳಿ, ಮಳಿಯಪ್ಪ ತಳವಾರ, ಲಕ್ಷ್ಮಣ್ಣ ತಳವಾರ, ನಾಗಪ್ಪ ಜಕ್ಕನ್ನವರ, ಮಳಿಯಪ್ಪ ಜಕ್ಕನ್ನವರ, ಸಿದ್ರಾಮಪ್ಪ ಜಕ್ಕನ್ನವರ, ಸಿದ್ದಪ್ಪ ಛಬ್ಬಿ, ರಾಮಣ್ಣ ಹೂಗಾರ, ಫಕೀರಪ್ಪ ಚಿಂಚಲಿ  ಹಾಗೂ ಮಹಿಳೆಯರು ಸಮಸ್ತ ದೈವಮಂಡಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಂಜುನಾಥ ಹುದಲಿ ಹಾಗೂ ಪ್ರಭು ಹಿರೇಮಠ ಕಾರ್ಯಕ್ರಮವನ್ನು ಸಂಯೋಜಿಸಿ ಗ್ರಾಮದ ಗುರುಹಿರಿಯರ ಸಹಾಯದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.