ಜನೇವರಿ 2 ರಂದು ಬಾಗಲಕೋಟ ತಾಲೂಕಾ ಜೆ.ಡಿ.ಎಸ್. ಕಾರ್ಯಕರ್ತರ ಸಭೆ

ಜನೇವರಿ 2 ರಂದು ಬಾಗಲಕೋಟ ತಾಲೂಕಾ ಜೆ.ಡಿ.ಎಸ್. ಕಾರ್ಯಕರ್ತರ ಸಭೆ

ಬಾಗಲಕೋಟ,ಡಿ. 29, ಬಾಗಲಕೋಟ ತಾಲೂಕಾ ಜೆ.ಡಿ.ಎ. ಪದಾಧಿಕಾರಿಗಳ ಹಾಗೂ ಭೂತಮಟ್ಟದ ಸಂಘಟನಾ ಸಭೆಯನ್ನು ದಿನಾಂಕ 2, ಜನೇವರಿ 2018 ರಂದು ಮುಂಜಾನೆ 10.30 ಗಂಟೆಗೆ ಬಾಗಲಕೋಟ ನಗರದ ಪಕ್ಷದ ಕಾರ್ಯಾಲಯದಲ್ಲಿ ತಾಲೂಕಾ ಅಧ್ಯಕ್ಷರಾದ ಸಲೀಂ ಮೋಮಿನ ಇವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. 
ಈ ಸಭೆಯಲ್ಲಿ ಪಕ್ಷದ ಸಂಘಟನೆ, ರಾಜ್ಯ ಅಧ್ಯಕ್ಷರಾದ ಶ್ರೀ ಎಚ್.ಡಿ. ಕುಮಾರಸ್ವಾಮಿಯವರ ಪ್ರವಾಸ ಹಾಗೂ ಪಕ್ಷಕ್ಕೆ ಇನ್ನಷ್ಟು ಕಾರ್ಯಕರ್ತರ ಸೇರ್ಪಡೆ ಕುರಿತು ಚರ್ಚಿಸಲಾಗುವುದು. ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ರವಿ ಹುಣಶ್ಯಾಳ ಸೇರಿ ಹಿರಿಯ ಮುಖಂಡರು ಉಪಸ್ಥಿತರಿರುವರು. ಈ ಸಭೆಗೆ ಬಾಗಲಕೋಟ ತಾಲೂಕಿನ ಎಲ್ಲ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಘಟಕದ ಅಧ್ಯಕ್ಷರುಗಳು ಸಮಯಕ್ಕೆ ಸರಿಯಾಗಿ ಹಾಜರಿದ್ದು, ಈ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ರೈತ ಘಟಕದ ಅಧ್ಯಕ್ಷ ಶ್ರೀ ರಾಮಣ್ಣ ಸುನಗದ ಹಾಗೂ ನಗರ ಘಟಕದ ಅಧ್ಯಕ್ಷರುಗಳಾದ ಶ್ರೀ ಯಾಸೀನ ನದಾಫ ಹಾಗೂ ಕೃಷ್ಣಾ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.